ಶ್ರೀನಿವಾಸಪುರ : ಗುರುವಾರ ಮದ್ಯಾಹ್ನ ಒಂದುವರೆ ಗಂಟೆಗೂ ಹೆಚ್ಚು ಸಮಯ ಬಿದ್ದ ಮಳೆ ಯಿಂದಾಗಿ ಪಟ್ಟಣದ ಚರಂಡಿ ನೀರು, ಹಾಗು ಮಳೆಯ ನೀರು ತಗ್ಗು ಪ್ರದೇಶಗಳ ರಸ್ತೆಗಳು ಮನೆಗಳು ಕೊಳಚೆ ನೀರಿನಿಂದ ತುಂಬಿತಳುಕುತ್ತಿತ್ತು. ಈ ವಸ್ತು ಸ್ಥತಿಯನ್ನು ಕಂಡ ಸಾರ್ವಜನಿಕರು ಜನಪ್ರತಿನಿದಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ಪ್ರಸಂಗಗಳು ನಡೆಯುತ್ತಿತ್ತು.
ಅಲ್ಲದೆ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಉದ್ದಗಲಕ್ಕೂ ಹರಿಯುವ ನೀರು ದ್ವಿಚಕ್ರ ವಾಹನ ಸವಾರರಿಗೂ, ಓಡಾಡುವ ಸಾರ್ವಜನಿಕರಿಗೂ ರಸ್ತೆ ಯಾವುದೂ, ಗುಂಡಿ ಯಾವುದು, ಚರಂಡಿ ಯಾವುದೂ ಎಂಬುದು ತಿಳಿಯದೇ ಪರದಾಡುತ್ತಿದ್ದರು, ಗ್ರಾಮಾಂತರ ಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಬಸ್ಗಳು ಸಿಗದೆ ಪರದಾಡುವಂತಹ ಪರಿಸ್ಥಿತಿ.
ಪಟ್ಟಣದ ಅಂಬೇಡ್ಕರ್ ಪಾಳ್ಯದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿರುವ ಪರಿಣಾಮ ರೇಷನ್ ಎಲ್ಲಾ ನೀರಮಯವಾಗಿದೆ. ಅಂಗನವಾಡಿ ಕೇಂದ್ರದ ಸುತ್ತು ಮುತ್ತಲು ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳು ಓಡಾಡಲು ಕಷ್ಟಕರವಾಗಿದೆ. ಎಂದು ಅಂಗನವಾಡಿ ಕಾರ್ಯಕರ್ತೆ ಆದಿಲಕ್ಷ್ಮ ಮಾಹಿತಿ ನೀಡಿದರು. ಚಂರಡಿಗಳಲ್ಲಿ ಕಸಕಡ್ಡಿಗಳು ತುಂಬಿರುವ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿಯದೆ ಮೆಳೆ ನೀರು ರಸ್ತೆ ಉದ್ದಾಗಲಕ್ಕೂ ಗಲೀಜು ನೀರು ಹರಿಯುತ್ತಿದೆ.
ಚಿಂತಾಮಣಿ ರಸ್ತೆಯಲ್ಲಿ ರೈಲ್ವೆ ಅಂಡರ್ ಪಾಸ್ ಬಳಿ ಮಳೆಯ ನೀರು ಶೇಖರಣೆಯು ಹೆಚ್ಚಾಗಿ , ನೀರು ಸರಾಗವಾಗಿ ಹರೆಯದೆ ದ್ವಿಚಕ್ರವಾಹನ ಸವಾರರು , ಟ್ರ್ಯಾಕ್ಟರ್ಗಳು , ಲಾರಿಗಳು ಈ ಸ್ಥಳದಲ್ಲಿ ವಾಹನ ಚಾಲನೆ ಮಾಡಲು ಹರಸಾಹಸವನ್ನು ಪಡೆಯುತ್ತಿದ್ದರು .
ಮುಂಗಾರು ಮಳೆಯು ಪ್ರಾರಂಭ ಇನ್ನಾದರೂ ಸಂಬಂದ ಪಟ್ಟ ಇಲಾಖೆಯು ಎಚ್ಚೆತ್ತು ರಾಜಕಾಲುವೆಗಳನ್ನು ಹಾಗೂ ಚರಂಡಿಗಳನ್ನು ಸ್ವಚ್ಚ ಮಾಡುವ ಕೆಲಸಗಳನ್ನು ಹಮ್ಮಿಕೊಳ್ಳಬೇಕು ಎಂದು ಅಂಬೇಡ್ಕರ್ ಪಾಳ್ಯದ ಕಿಶೋರ್ ಆಗ್ರಹಿಸಿದ್ದಾರೆ.