ಶ್ರೀನಿವಾಸಪುರ; ಭೀಮಾ ಕೋರೆಗಾಂವ್ ಯುದ್ದ ದಲಿತರ ಪಾಲಿಗೆ ಅತ್ಯಂತ ಮಹತ್ವದ ದಿನ ಎಂದ ದಲಿತ ಮುಖಂಡ ರಾಮಾಂಜಮ್ಮ .
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಭೀಮಾ ಕೋರೆಗಾಂವ್ ಕಾರ್ಯಕ್ರಮಕ್ಕೆ ಪ್ರಯಾಣ ಬೆಳಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜಮ್ಮ ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೆ ಇರುವ ಸ್ಥಳ ಭೀಮಾ ಕೋರೆಗಾಂವ್ ಈ ಹೆಸರು ಭಾರತದ ಇತಿಹಾಸದಲ್ಲಿ ಹೆಸರಾದ ಕದನ ಹಾಗೂ ಭೂಮಿ ಇದು ದಲಿತರ ಆತ್ಮ ಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡಿರುವ ಸ್ಥಳವಿದು 500 ಮಂದಿ ದಲಿತ ಹೋರಾಟಗಾರರ ಆಹಾರ, ನೀರು, ಹಾಗೂ ವಿಶ್ರಾಂತಿ ಇಲ್ಲದೆ 78 ಸಾವಿರ ಮಂದಿ ಇದ್ದ ಸೈನ್ಯದ ವಿರುದ್ದ ನಿರಂತರ 12 ಗಂಟೆ ಕಾದಾಡಿದ ಸ್ಮರಣೆಯ ಕದನ ಅದು. 500 ಸೈನ್ಯಕರ ಇತಿಹಾಸವನ್ನು ಸೃಷ್ಟಿಸಿದರು ಪೇಶ್ವೆಗಳ 78 ಸಾವಿರ ಸೈನ್ಯ ಬಲವನ್ನು ಸೋಲಿಸಿದರು ಕೋರೆಗಾಂವ್ ಸ್ಮಾರಕದಲ್ಲಿ 72 ಮಹಾ ಸೈನ್ಯಕರ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯವರಿಗೂ ಇತ್ತು. ಇದು ಮಹರ್ ಸೈನ್ಯಕರ ವೀರ ಸ್ಮಾರಕ ಇದು.
ಈ ಸೈನ್ಯಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ ( ವಿಜಯ ಸ್ಥಂಭ) ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅತ್ಯಂತ ಕಡಿಮೆ ಜನ ಸಂಖ್ಯೆಯ ಸೈನ್ಯಕರಿಗೆ ಯುದ್ದಕ್ಕೆ ಇಳಿದ ಬ್ರೀಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಈ ಯುದ್ದವೇ ಪೇಶ್ವಗಳ ಆಡಳಿತ ಹಂತಕ್ಕೆ ಕಾರಣವಾಯಿತು. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರುರೂರಿದ್ದ ಅಸ್ಪøಶ್ಶತೆಯ ಬೇರುಗಳನ್ನು ಅಲೆಗಾಡಿಸಲು ನೆರವಾದ ಸಂದರ್ಭ ಅದು. ಪ್ರತಿ ವರ್ಷ ಜನವರಿ 1 ರಂದು ಪೂನಾ ಸಮಿಪದ ಕೋರೆಗಾಂವ್ ಸೈನ್ಯಿಕ ವಿಜಯದ ಸ್ಥಂಭದ ಬಳಿ ಭಾರತದ ವಿವಿದ ಭಾಗಗಳಿಂದ ಬಂದು ಲಕ್ಷಾಂತರ ಜನ ಭಾಗವಹಿಸಿ ಕಣ್ಣು ತುಂಬಿಸಿಕೊಂಡು ನಮಸ್ಕರಿಸಿ ತೆರಳುತ್ತಾರೆ. 1817 ರಲ್ಲಿ ನಡೆದ ಮೆಹರ್ ರೆಜಿಮೆಂಟ್ ಪೇಶ್ವ ಸೈನ್ಯವನ್ನು ಸೋಲಿಸಿದ ದಿನವನ್ನು ಶೌರ್ಯ ಸ್ವಾಭೀಮಾನದ ವಿಜಯ ದಿನವನ್ನಾಗಿ ಆಚರಿಸುತ್ತಾರೆ. ಈ ಒಂದು ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ವರ್ಷವು ತೆರಳುತ್ತಿದ್ದೇವೆಂದು ತಿಳಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ಮಾತನಾಡಿ ಭೀಮಾ ಕೋರೆಗಾಂವ್ ಮಹಾರಾಷ್ಟ್ರದ ಇಂದಿನ ಪುಣೆ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಭಾರತದ ಇತಿಹಾಸದಲ್ಲಿಯೆ ಭೀಮಾ ಕೋರೆಗಾಂವ್ ಕದನಕ್ಕೆ ಮಹತ್ವದ ಸ್ಥಾನವಿದೆ. ವಿಜಯೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಯುದ್ದದಲ್ಲಿ ಆನೇಕರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ಒಂದು ಪುಣ್ಯದ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿರುವ ನಿಮಗೆ ನಿಮ್ಮ ಪ್ರಯಾಣ ಸುಖವಾಗಿ ಸಾಗಲಿ ಎಂದು ಶುಭವನ್ನು ಹಾರೈಸಿದರು.
ಈ ಸಮಯದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್, ಉಪ್ಪರಪಲ್ಲಿ ತಿಮ್ಮಯ್ಯ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ದೊಡ್ಡಬಂರ್ದಾಲಹಳ್ಳಿ ಮುನಿಯಪ್ಪ, ಮುದಿಮಡಗು ವಾಸು, ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ, ಹೆಬ್ಬಟ ಅನಂದ್, ನಾಗದೇನಹಳ್ಳಿ ಶ್ರೀನಿವಾಸ್, ಮುಳುಬಾಗಿಲಪ್ಪ, ರೆಡ್ಡೆಪ್ಪ, ಲಕ್ಷ್ಮೀಪತಿ, ಬತ್ತಲಗುಟ್ಟಲ್ಲಪಲ್ಲಿ ನರಸಿಂಹಪ್ಪ, ಇನ್ನೀತರರು ಉಪಸ್ಥಿತರಿದ್ದರು.