ಶ್ರೀನಿವಾಸಪುರ 1 : ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅಮೂಲ್ಯವಾದದು . ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು, ಇದರಿಂದ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಇನ್ಸಪೆಕ್ಟರ್ ಎಂ.ಬಿ.ಗೊರವನಕೊಳ್ಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಟ್ಟಹವ್ಯಾಸಗಳಿಗೆ ಮಾರುಹೋಗುತ್ತಿರುವವರು ಎಚ್ಚರಿಕೆಯಿಂದ ಇರುಬೇಕು . ದುಶ್ಚಟಗಳಿಂದ ಆರೋಗ್ಯವು ಕೆಡುವುದಲ್ಲದೇ ಆರೋಗ್ಯವಂತ ಜೀವನವನ್ನೇ ಹಾಳು ಮಾಡಿಕೊಂಡತ್ತೆ. ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳುಮಾಡಿಕೊಂಡ ಮೇಲೆ ಸಮಾಜವು ನಿಮ್ಮನ್ನು ಗೌರವಿಸುವುದಿಲ್ಲ ಎಂದರು.
ನಿಮ್ಮ ಗ್ರಾಮ ಅಥವಾ ನಿಮ್ಮ ಗೊತ್ತಿದ್ದ ಯಾವದೇ ಒಂದು ಸ್ಥಳಗಳಲ್ಲಿ ಮರಾಟ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದ್ದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದರೆ ನಾವು ಕಾನೂನು ರೀತಿಯ ಕ್ರಮ ಜರುಗಿಸುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಹೆಸರನ್ನು ಬಹಿರಂಗಪಡಿಸುವುದಿಲ್ಲ.
ವಿದ್ಯಾರ್ಥಿನೀಯರು ನಿಮಗೆ ಯಾವುದೇ ರೀತಿಯಾದ ಕಿರುಕುಳ ನೀಡುವುದಾಗಲಿ ಅಥವಾ ಹಿಂಬಾಲಿಸಿ ಹಿಂಸೆ ನೀಡಲು ಮುಂದಾದಂತಹ ಸಂದರ್ಭದಲ್ಲಿ ಕೂಡಲೇ ನಿಮ್ಮ ಪೋಷಕರಿಗೆ, ಅಥವಾ ಪೊಲೀಸ್ಠಾಣೆಗೆ ನೇರವಾಗಿ ದೂರು ನೀಡಬಹುದು . ನಿಮಗೆ ಯಾವುದೇ ಸಮಾಜಘಾತಕ ಮಾಹಿತಿಗಳು ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದರು.
ವಿಶೇಷವಾಗಿ ಗಂಗೋತ್ರಿ ಕಾಲೇಜಿನಲ್ಲಿ ಮೊಬೈಲ್ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಪಕ್ಕದ ಅಂಗಡಿಗಳಲ್ಲಿ ಮೊಬೈಲ್ಗಳನ್ನು ಕೊಡುತ್ತಿರುವುದು ಗಮನಕ್ಕೆ ಬಂದಿದೆ ಆ ಅಂಗಡಿಗಳ ಮೇಲೆ ದಾಳಿ ಮಾಡಿ ಮೊಬೈಲ್ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರ ವಿರುದ್ಧವೂ ಸಹ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಮಯದಲ್ಲಿ ಪಟ್ಟಣದ ಪದವಿ ಕಾಲೇಜು, ಆದರ್ಶ ಪ್ರೌಡಶಾಲೆ, ಮ್ಯಾಂಗೋವ್ಯಾಲಿ ಶಾಲೆಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗಂಗೋತ್ರಿ ಕಾಲೇಜಿನ ಅಧ್ಯಕ್ಷ ಮುರಳಿನಾಥ್ ಮಾತನಾಡಿ ವಿದ್ಯಾರ್ಥಿ ಜೀವನವು ಅಮೂಲ್ಯವಾದದು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಾಣಿಸರಾಗದೆ . ಆರೋಗ್ಯ ವಂತ ಜೀವನವನ್ನು ನಡೆಸುತ್ತಾ, ಜೀವನದ ಗುರಿಯನ್ನು ಸಾಧಿಸುವಂತೆ ಕರೆನೀಡಿದರು.
ಪಿಎಸ್ಐ ರಮಾದೇವಿ, ಎಎಸ್ಐ ನಂಜುಂಡಪ್ಪ, ಗಂಗೋತ್ರಿ ಕಾರ್ಯದರ್ಶಿ ಅಮರನಾಥ್, ಪ್ರಾಂಶುಪಾಲ ಎಲ್.ಸುಬ್ರಮಣಿ, ಉಪನ್ಯಾಸಕರಾದ ಸಿ.ಎಸ್.ಶ್ರೀವಿದ್ಯಾವೆಲ್ಲಾಲ್, ನರೇಶ್, ಶಿವಾರೆಡ್ಡಿ, ಮಂಜುಳ, ನಾಗೇಶ್, ಹಸೇನ್, ವಿಜಯ್ಪ್ರಭಂಜನ್, ನಂದೀಶ್, ರೂಪ, ಎಸ್.ಸಿ.ಬಾಲಕೃಷ್ಣ, ಅಶೋಕ್, ಮೋಹನ್, ನಂದೀಶ್, ಬೈರೆಡ್ಡಿ, ನಾಗರಾಜ್ ಇದ್ದರು.