

ಶ್ರೀನಿವಾಸಪುರ : ಪದಾಧಿಕಾರಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಾ ಸಮುದಾಯಕ್ಕೆ ಅನ್ಯಾಯವಾದಗ ಪದಾಧಿಕಾರಿಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಜಿಲ್ಲಾ ಸಂಚಾಲಕ ಬಿ.ಎಂ.ರಮೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಜಿಲ್ಲಾ ಸಮಿತಿಯಿಂದ ತಾಲೂಕು ಪದಾಧಿಕಾರಿಗಳ ಅಯ್ಕೆ ಸಭೆಯಲ್ಲಿ ಮಾತನಾಡಿದರು.
ತಾಲೂಕು ಸಂಚಾಲಕ ಮಟ್ಕನ್ನಸಂದ್ರ ಎಂ.ವಿ.ನಾರಾಯಣಸ್ವಾಮಿ ಸಂಘಟನೆಯ ಹಿರಿಯ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಮುದಾಯ ವರ್ಗಕ್ಕೆ ಅನ್ಯಾಯವಾದಗ ನ್ಯಾಯ ಒದಗಿಸಲು ಬೇಕಾದ ಹೋರಾಟ ಮಾಡಿ ನ್ಯಾಯ ಒದುಗಿಸಲು ಬೇಕಾದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಮೇಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ತಾಲೂಕು ಸಂಘಟನಾ ಸಂಚಾಲಕ ಎಂ.ಶ್ರೀನಿವಾಸಪ್ಪ , ಖಾಜಾಂಚಿ ಮಾಸ್ತೇನಹಳ್ಳಿ ಎಂ.ವೆಂಕಟರಮಣ, ಜಿಲ್ಲಾ ಸಂಘಟನಾ ಸಂಚಾಲಕ ಎಂ.ಕೃಷ್ಣಪ್ಪ, ಜಿಲ್ಲಾ ಮುಖಂಡರಾದ ಶಿವಣ್ಣ, ಅಮರೇಶ್, ಎಂ.ಡಿ.ಅಸ್ಲಂಪಾಷ, ವೆಂಕಟೇಶ್, ರಾಮರೆಡ್ಡಿ, ವೆಂಕಟೇಶ್, ಪದಾಧಿಕಾರಿಗಳಾದ ಹನುಮಂತಪ್ಪ, ತಾಡಿಗೋಳ್ ಅಮರಮ್ಮ, ಚೆನ್ನಯ್ಯಗಾರಿಪಲ್ಲಿ ಆಂಜಪ್ಪ ಇದ್ದರು.