ಶ್ರೀನಿವಾಸಪುರ 2 : ಕಾಲೇಜು ಕಾರಿಡಾರ್ ಎಂದಿನಂತೆ ವಿದ್ಯಾರ್ಥಿಗಳ ಹರಟೆ ಸೀಮಿತವಾಗದೆ, ಅದರ ತುಂಬೆಲ್ಲಾ ಬಾಯಲ್ಲಿ ನೀರೂರಿಸುವ ತಿಂಡಿ ತಿನುಸುಗಳೇ , ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಅವಿಸ್ಮರಣೀಯಾಗಿರುವುದು ಎಂದು ಗ್ರಾಮದ ಸಿ.ಎಸ್.ವೆಂಕಟ್ ಅಭಿಪ್ರಾಯಪಟ್ಟರು.
ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಂದ ನಡೆದ ಹಳ್ಳಿ ಸೊಬಗು ಕಾರ್ಯಕ್ರಮದಡಿಯಲ್ಲಿ ಕಾಲೇಜು ಸಂತೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಅಧುನಿಕ ಕಾಲದಲ್ಲಿ ಸಾಮಾಜಿಕ ಜಲಾತಾಣದಲ್ಲಿ ಹೆಚ್ಚಾಗಿ ಕಾಲ ಕಳೆಯುವ ವಿದ್ಯಾರ್ಥಿಗಳಲ್ಲಿ ಮಕ್ಕಳ ಸಂತೆ ಸಹಬಾಳ್ವೆ , ಸಹಜೀವನದ ಕಲ್ಪನೆಯನ್ನು ಮೂಡಿಸಿತು. ತರಗತಿಯ ನಾಲ್ಕು ಗೋಡೆಯ ಮದ್ಯೆ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಗಣಿತದ ಪ್ರಾಯೋಗಿಕ ಪಾಠ ಹೇಳಿತು. ವೃತ್ತಿ ಶಿಕ್ಷಣಕ್ಕೆ ಉತ್ತೇಜನ ನೀಡಿತು. ಇಂತಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ಆಗಾಗ ನಡೆದರೆ ಒಳ್ಳೆಯದು ಎಂದರು.
ಪ್ರಾಂಶುಪಾಲೆ ಎಚ್.ಆಶಾ ಮಾತನಾಡಿ ಸಂತೆ ಮಾರುಕಟ್ಟೆ ಎನ್ನುವುದು ಸರಕು ಮಾರುವವರನ್ನ ಮತ್ತು ಕೊಳ್ಳುವವರನ್ನ ಒಂದಡೆ ಸೇರಿಸುವ ಸ್ಥಳವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಇಂದು ಕಾರ್ಯಕ್ರಮದಿಂದ ನಾಲ್ಕು ಗೋಡೆಗಳ ಮದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಾನಾ ಉತ್ಪನ್ನಗಳ ತಯಾರಿಕೆ , ಅವುಗಳ ಮಾರುಕಟ್ಟೆಯ ಅನುಭವ ಪಡೆದುಕೊಳ್ಳಬೇಕು. ಇದರಿಂದ ಸ್ವಯಂ ಉದ್ಯೋಗಕ್ಕೂ ಇದರಿಂದ ಪ್ರೇರಣೆಯಾಗಬೇಕು ಎಂದು ಸಲಹೆ ನೀಡಿದರು.
ಸಂತೆಯಲ್ಲಿ ವ್ಯಾಪಾರಕ್ಕಾಗಿ ಗ್ರಾಹಕರನ್ನು ಕೂಗಿ ಕರೆಯವುದು, ವಸ್ತುಗಳ ವ್ಯಾಪಾರಕ್ಕಾಗಿ ದರದಲ್ಲಿ ಹೆಚ್ಚು ಕಡಿಮೆ ಮಾಡಿ ಚೌಕಾಸಿ ನಡೆಸುವುದು, ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ವಿದ್ಯಾರ್ಥಿಗಳು ಅನುಸರಿಸಿದ ತಂತ್ರಗಳು ಗಮನ ಸೆಳೆದವು. ರಾಧಾಸ್ ಕಾಫಿ 2000, ವಿನಾಯಕ ಫ್ರೋಟ್ಸ್ 1900, ರಾಯಲ್ಸ್ ಸ್ಯಾಂಡ್ವಿಚ್ಚ್ 1800 ಸ್ಟಾಲ್ಗಳಲ್ಲಿ ವ್ಯಾಪಾರ ವಹಿವಾಟು ನಡೆದವು.
ಕಾಲೇಜಿನ , ಪ್ರೌಡಶಾಲೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸಂತೆಯಲ್ಲಿ ಗ್ರಾಹಕರಾಗಿದ್ದರು. ಗ್ರಾ.ಪಂ ಸದಸ್ಯ ಆರ್.ವಿ.ನಾಗೇಶ್, ಉಪನ್ಯಾಸಕರು , ಪ್ರೌಡಶಾಲಾ ಶಿಕ್ಷಕರು ಭಾಗವಹಿಸದ್ದರು.