

ಶ್ರೀನಿವಾಸಪುರ : 2025-26 ನೇ ಸಾಲಿಗೆ ಸರ್ಕಾರಿ ಸುತ್ತೋಲೆಯಂತೆ ಆಸ್ತಿ ತೆರಿಗೆ ಪರಿಷ್ಕರಣೆ, ವಿವಿಧ ಬಾಬ್ತುಗಳ ಮೊತ್ತವನ್ನು ಸ್ಥಿರೀಕರಣ ಮಾಡುವ ಬಗ್ಗೆ , ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ, ಪಟ್ಟಣ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಪುಟ್ಪಾತ್ ನಿರ್ಮಾಣ ಮಾಡುವ ವಿಚಾರವಾಗಿ ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಈಸಭೆಯಲ್ಲಿ 87.56ಲಕ್ಷ ಉಳಿತಾಯ ಬಜೆಟ್ನ್ನು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಂಡಿಸಿದರು.
ಪಟ್ಟಣದ ಪುರಸಭಾ ಕಚೇರಿಯಲ್ಲಿ ಬುಧವಾರ 2025-26 ನೇ ಸಾಲಿನ ಆಯ-ವ್ಯಯ ಸಭೆ ಹಾಗು ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣವನ್ನು ಅಭಿವೃದ್ಧಿಪಡಿಸುವ ಅನೇಕ ಕಾರ್ಯಕ್ರಮಗಳನ್ನು ಪುರಸಭೆಯಿಂದ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು. ರಾಜಾಜಿ, ರಾಮಕೃಷ್ಣ ಬಡವಾಣೆ ಮುಖ್ಯ ರಸ್ತೆಗಳಲ್ಲಿ ಕೆಲವುರು ಬೀದಿಗಳಲ್ಲಿನ ಪುಟ್ಪಾತ್ ಮೇಲೆ ವ್ಯಾಪಾರ ವಹಿವಾಟು ಮಾಡುವುದರಿಂದ ಸಾರ್ವಜನಿಕರು ಓಡಾಡುವುದಕ್ಕೆ ಹಾಗು ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ಯಾವುದೇ ಕಾರಣಕ್ಕೂ ಪುಟ್ಪಾತ್ನಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಕಟ್ಟನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿ ಅದರ ಸಲುವಾಗಿ ಅತಿ ಶೀಘ್ರವಾಗಿ ಪುಟ್ಪಾತ್ ನಿರ್ಮಾಣ ಮಾಡಲಾಗುವುದು.
ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜ್, ಉಪಾಧ್ಯಕ್ಷೆ ಕೆ.ಎಸ್.ಸುನಿತಾ, ಪುರಸಭಾ ಸದಸ್ಯರು ಹಾಗು ಕಂದಾಯ ಅಧಿಕಾರಿ ಎನ್.ಶಂಕರ್, ನಿರೀಕ್ಷಕ ಮಂಜುನಾಥ್, ಕಂದಾಯ ವಸೂಲಿಗಾರ ಪ್ರತಾಪ್, ಅರೋಗ್ಯ ನಿರೀಕ್ಷಕ ಸಿ. ಸುರೇಶ್, ಎಫ್ಡಿಎಗಳಾದ ಸಂತೋಷ, ನಾಗೇಶ್, ಸಿಬ್ಬಂದಿಗಳಾದ ವೇದಾಂತ್ಶಾಸ್ತ್ರಿ, ಹಾಜರಿದ್ದರು.
