ಶ್ರೀನಿವಾಸಪುರ : ತಾಲೂಕಿನ ಬೈರಗಾನಹಳ್ಳಿ ಗ್ರಾಮಪಂಚಾಯಿತಿ ಪ್ರಬಾರಿ ಪಿಡಿಒ ಎಂ.ಎಸ್. ಶ್ರೀನಿವಾಸರೆಡ್ಡಿ, ಪಂಚಾಯಿತಿ ವ್ಯಾಪ್ತಿಗೆ ಸಂಬಂದಿಸಿದಂತೆ ನರೇಗಾ ಯೋಜನೆ ಕಾಮಗಾರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಕಾಮಗಾರಿ ನಡೆಸದೆ ಇದ್ದರೂ ಬಿಲ್ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಬಸಂತಪ್ಪರವರು ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ನರೇಗಾ ಯೋಜನೆಯಡಿಯಲ್ಲಿ ಕೊತ್ತಹುಡ್ಯ, ಬೈರಗಾನಹಳ್ಳಿ ಗ್ರಾಮದ ಗೋಮಾಳ ಸವೇ , ನಂ. 124 ರಲ್ಲಿ ಗೋಕುಂಟೆ ನಿರ್ಮಾಣ ಮಾಡಿದ್ದು, ಈ ಕಾಮಗಾರಿಗಳಲ್ಲಿ ನ್ಯೂನ್ಯತೆ ಕಂಡಿಬಂದಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲು ಉಪಕಾರ್ಯದರ್ಶಿ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ ಎಂದರು.
ಉಪಕಾರ್ಯದರ್ಶಿಗಳ ತಂಡ ಕಾಮಗಾರಿಗಳನ್ನು ಪರಿಶೀಲಿಸಿ ಹಾಗೂ ಕಾಮಗಾರಿಗಳ ಬಗ್ಗೆ ದಾಖಾಲೆಗಳನ್ನು ಪರಿಶೀಲಿಸಿದ ವೇಳೆಯಲ್ಲಿ ಕಾಮಗಾರಿಗಳಿಗೆ ಸಂಬಂದಿಸಿದಂತೆ ಕೂಲಿ ಕಾರ್ಮಿಕರಿಂದ ಕಾಮಗಾರಿಯನ್ನು ಅನುಷ್ಟಾನ ಮಾಡಿರುವ ಬಗ್ಗೆ ಯಾವುದೇ ರೀತಿಯಾದ ದಾಖಲೆಗಳು ಅಭ್ಯವಿರುವುದಿಲ್ಲ.
ಅನುಷ್ಟಾನಗೊಂಡಿರುವ ಗೋಕುಂಟೆಗೆ ಸಂಬಂದಿಸಿದಂತೆ ಕಾಮಗಾರಿಗಳ ಅಳತೆಯನ್ನು ಪರೀಶಿಲಿಸಿದಾಗ ದಾಖಲೆಗೆ ಮಾತ್ರ ದಾಖಲಿಸಲಾಗಿದೆ. ಆದರೆ ಆಳತೆಯಲ್ಲಿ ವ್ಯತ್ಯಾಸವಿದ್ದು ಕೂಲಿಯ ಪೂರ್ಣವೆಚ್ಚವನ್ನು ಪಾವತಿ ಮಾಡಿರುವುದು ಕಂಡುಬಂದಿರುತ್ತದೆ.
ಸದರಿ ಕಾಮಗಾರಿಗಳ ಅಂದಾಜು ಪಟ್ಟಿಗೂ ಕಾಮಗಾರಿ ಅನುಷ್ಟಾನಕ್ಕೂ ಮತ್ತು ಅಳತೆ ಪುಸ್ತಕಕ್ಕೂ ಯಾವುದೇ ರೀತಿಯ ತಾಳೆಯಾಗದಿರುವುದು ಕಂಡು ಬಂದಿದೆ. ಮರಸನಪಲ್ಲಿ ಗ್ರಾಮ ಸತೀಶ್ ಜಮೀನಿನ ಕಾಲುವೆಯ ಕಾಮಗಾರಿಯಲ್ಲಿ ವ್ಯತ್ಯಾಸವಿದೆ ಎಂದರು.
ಎಂ.ಎಸ್.ಶ್ರೀನಿವಾಸರೆಡ್ಡಿ ರವರ ನೇತೃತ್ವದಲ್ಲಿ ನಡೆದಿರುವ ಈಗಾಗಲೇ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಲಾಗಿ ಕಾಮಾಗಾರಿಗಳಲ್ಲಿ ನ್ಯೂನ್ಯತೆ ಕಂಡುಬಂದದಿದ್ದು, ಈ ಕಾಮಗಾರಿಗಳ ನ್ಯೂನ್ಯತೆಗಳ ಬಗ್ಗೆ ಸಮಾಜಾಯಿಷಿ ನೀಡುವಂತೆ ನೋಟಿಸ್ ನೀಡಲಾಗಿತ್ತು ಆದರೂ ಸಹ ಕಾಮಗಾರಿಗೆ ಸಂಬಂದಿಸಿದಂತೆ ಪೂರಕ ದಾಖಲೆ ನೀಡಿದ ಹಿನ್ನೆಲೆಯಲ್ಲಿ ಎಂ.ಎಸ್ . ಶ್ರೀನಿವಾಸರೆಡ್ಡಿ ಅಮಾನತ್ತು ಪಡಿಸಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದರು.