ಶ್ರೀನಿವಾಸಪುರ : ಪ್ರಜಾಪ್ರಭುತ್ವದಲ್ಲಿ ಭಾತರದ ಪೌರರಾದ ನಾವು ನಮ್ಮ ದೇಶದ ಪ್ರಜಾತತ್ಮಕ ಸಂದ್ರಾಯಗಳು ಮತ್ತು ಮುಕ್ತ , ನ್ಯಾಯಸಮ್ಮತ, ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು , ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿಭೀತವಾಗಿ ಮತ್ತು ಧರ್ಮ , ಜನಾಂಗ , ಜಾತಿ, ಮತ, ಬಾಷೆ ಅಥವಾ ಯಾವುದೇ ಪ್ರೇರೆಪಣಿಗೆ , ದಾಕ್ಷಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆಯನ್ನು ಸ್ವೀಕರಿಸುತ್ತೇವೆ ಪ್ರತಿಜ್ಞೆಯನ್ನು ಎಆರ್ಒ ಎಂ.ಆರ್.ಸುಮ ಬೋಧಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಏ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮಹಾಹಬ್ಬದಲ್ಲಿ ಪ್ರತಿಯೊಬ್ಬ ಮತದಾರರು ಮತಗಟ್ಟೆಗಳಿಗೆ ತೆರಳಿ ಅಮೂಲ್ಯ ಮತ್ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕಿದೆ ಎಂದರು.
ಇಒ ಎ. ಜೋಷಫ್, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ತಾ.ಪಂ. ವ್ಯವಸ್ಥಾಪಕ ಮಂಜುನಾಥ್, ಸಹಾಯಕ ನಿರ್ದೇಶಕ ರಾಮಪ್ಪ, ವ್ಯವಸ್ಥಾಪಕ ನವೀನ್ಚಂದ್ರ, ಕೆ.ಜೆ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್ , ಸಿಡಿಪಿಒ ನವೀನ್, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಿಡಿಒಗಳಾದ ಕೆ.ಪಿ.ಶ್ರೀನಿವಾಸರೆಡ್ಡಿ , ಮಂಗಳಾಂಬ, ಶಂಕರಪ್ಪ, ಜಯಪ್ರಕಾಶ್, ಏಜಾಜ್ಪಾಷ, ಮಂಜುನಾಥಸ್ವಾಮಿ, ವಿಜಯಕುಮಾರಿ, ಚಂದ್ರಶೇಖರ್, ಬಿಇಆರ್ಟಿ ಅಧಿಕಾರಿ ಜಿ.ವಿ.ಚಂದ್ರಪ್ಪ, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು , ಜಾನಪದ ತಂಡಗಳು ಇದ್ದರು.