

ಶ್ರೀನಿವಾಸಪುರ : ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ಇರುವ ಆರ್ಟಿಒ ಚೆಕ್ಪೋಸ್ಟ್ ಮೇಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಸುಮಾರು 3 ಗಂಟೆಯಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ ದಾಖಲೆಗಳ ಪರೀಶಿಲನೆ.
ಆರ್ಟಿಒ ಚೆಕ್ ಪೋಸ್ಟ್ಗಳ ವಿರುದ್ಧ ಅತಿಯಾದ ದೂರುಗಳು ಬಂದ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಯಿತು ಎಂದು ಎಸ್ಪಿ ಧನಂಜಯ್ ಮಾಹಿತಿ ನೀಡುತ್ತಾ, ದಾಖಲೆಗಳನ್ನು ಪರೀಶಿಲಿಸಿದ ವೇಳೆ ದಾಖಲೆ ಹಣಕ್ಕಿಂತ 400 ರೂ ಕಡಿಮೆ ಇರುವುದಾಗಿ ಸ್ಪಷ್ಟಪಡಿಸಿದರು. ಸತತ 8 ಗಂಟೆಗಳ ಕಾಲ ಇತರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದರು.