

ಶ್ರೀನಿವಾಸಪುರ : ಆಕಸ್ಮಿಕ ಬೆಂಕಿ ತಗುಲಿ ಟನ್ ಗಟ್ಟಲೆ ಹಳೆ ಪ್ಲಾಸ್ಟಿಕ್ ಇದ್ದ ಗುಜರಿ ಅಂಗಡಿ ಧಗಧಗನೇ ಹೊತ್ತಿ ಉರಿದ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲ್ಲಿ ನಡೆದಿದೆ.
ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಹಳೆ ಮಾವಿನಕಾಯಿ ಮಂಡಿ ಮುಂಭಾಗದಲ್ಲಿ ಜಾವೀದ್ ಪಾಷ ಎನ್ನುವರಿಗೆ ಸೇರಿದ ಹಳೆಯ ಪ್ಲಾಸ್ಟಿಕ್ ಗೋದಾಮು ಇದ್ದು ಅಲ್ಲೆ ನಾನಾ ರೀತಿಯ ಹಳೆಯ ಗುಜರಿ ಸಾಮಾನುಗಳನ್ನು ತಗೆದುಕೊಳ್ಳುತ್ತಿದ್ದ ಅಂಗಡಿ ಇತ್ತು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ರೀಸೈಕ್ಲಿಂಗ್ ಉಪಕರಣಗಳು ಮಿಷನರಿಗಳು ಮಂಗಳವಾರ ತಡ ರಾತ್ರಿ ಸುಮಾರು 10 ಗಂಟೆ ರಾತ್ರಿಯಲಿ ಸುಟ್ಟು ಭಸ್ಮವಾಗಿವೆ.