ಶ್ರೀನಿವಾಸಪುರ : ಪುರಸಭಾ ಅಧ್ಯಕ್ಷರ ಕಛೇರಿಯಲ್ಲಿಂದು ಪುರಸಭಾ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರ ಕುಂದು ಕೊರತೆಗಳ ಸಭೆ ನಡೆಸಿದರು.
ಪ್ರತಿ ದಿನ ಬೆಳಿಗ್ಗೆ ಎಲ್ಲಾ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರು ಸಮವಸ್ತ್ರ-ಸುರಕ್ಷಿತ ಸಲಕರಣೆಗಳನ್ನು ಧರಸಿ ಕರ್ತವ್ಯಕ್ಕೆ ಹಾಜರಾಗಿ ಶ್ರೀನಿವಾಸಪುರ ನಗರದ ಸುಚ್ಚಿತ್ವವನ್ನು ಕಾಪಾಡಲು ತಿಳಿಸಿದರು.
ಖಾಯಂ ಪೌರಕಾರ್ಮಿಕರಿಗೆ ಪ್ರತಿ ಮಾಹೆಯಾನ ವೇತನ ಪಾವತಿಯಾಗುವಂತೆ ಹೊರಗುತ್ತಿಗೆ ಕಾರ್ಮಿಕರಿಗೂ ಸಹ ಪ್ರತಿ ಮಾಹೆಯ 5ನೇ ತಾರೀಖಿನ ಒಳಗಾಗಿ ವೇತನ ಪಾವತಿ ಮಾಡುವಂತೆ ನೌಕರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಬ್ಬಂಧಿಗಳ ಸಮ್ಮುಖದಲ್ಲಿಯೇ ದೂರವಾಣಿ ಮೂಲಕ ಗುತ್ತಿಗೆದಾರನ್ನು ಸಂಪರ್ಕಸಿ ಬಾಕಿ ಇರುವ 03 ತಿಂಗಳ ವೇತನವನ್ನು ಇಂದೇ ಕಾರ್ಮಿಕರ ಖಾತೆಗೆ ಜಮೆ ಮಾಡುವಂತೆ ಆದೇಶಿಸಿದರು.
ಖಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲು ಇರುವ ತೊಡಕಗಳನ್ನು ಒಂದು ವಾರದಲ್ಲಿ ಬಗೆಹರಿಸಲಾಗುವುದು ಎಂಬುದಾಗಿ ತಿಳಿಸಿದ ಅವರು ಹೊರಗುತ್ತಿಗೆ ಕಾರ್ಮಿಕರಿಗೂ ಸಹ ಮುಂದಿನ ದಿನಗಳಲ್ಲಿ ಸೂಕ್ತ ಜಾಗವನ್ನು ಗುರುತಿಸಿ ನಿವೇಶನಗಳನ್ನು ವಿತರಣೆ ಮಾಡಲಾಗುವುದೆಂದು ಹಾಗೂ ಹೊರ ಗುತ್ತಿಗೆ ನೌಕರರು ನಿವೇಶನ ಹೊಂದಿದ್ದಲ್ಲಿ ತಕ್ಷಣವೇ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.