ಶ್ರೀನಿವಾಸಪುರ: ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಡಿ.ದೇವರಾಜ , ಐ.ಪಿ.ಎಸ್ . , ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಸಚಿನ್ ಪಿ ಘೋರ್ಪಡೆ , ಕೆ.ಎಸ್.ಪಿ.ಎಸ್ , ರವರ ಮಾರ್ಗದರ್ಶದಲ್ಲಿ ಮುಳಬಾಗಿಲು ಉಪ – ವಿಭಾಗದ ಪ್ರಭಾರ ಡಿ.ಎಸ್.ಪಿ ಶ್ರೀ ಪಿ.ಮುರಳಿಧರ್ ರವರ ಮುಂದಾಳತ್ವದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಠಾಣೆಯ ಅಪರಾಧ ವಿಭಾಗದ ಎ.ಎಸ್.ಐ ಅಮೀದ್ಖಾನ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ , ಸುರೇಶ , ವೆಂಕಟಾಚಲಪತಿ , ರಾಮಚಂದ್ರ , ಷಫೀವುಲ್ಲಾ , ಸಂದೀಪ್ , ರಿಜ್ವಾನ್ , ಸುಬಾನ್ ರವರೊಂದಿಗೆ ದಿನಾಂಕ : 05-08-2022 ರಂದು ಮಧ್ಯಾಹ್ನ 12:45 ಗಂಟೆಗೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಳಗೆರನಹಳ್ಳಿಗೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿ ಅಕ್ರಮವಾಗಿ ಗಾಂಜವನ್ನು ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕೋಲಾರ ನಗರದ ಟವರ್ ವಾಸಿಯಾದ ನೂರ್ @ ನೂರ್ಪಾಷ ಬಿನ್ ಲೇಟ್ ಅಮೀರ್ ಜಾನ್ , 50 ವರ್ಷ , ರೇಷ್ಮೆ ಕೆಲಸ ಎಂಬುವವನನ್ನು ಪಂಚರ ಸುಮಾರು 10,50,000 / – ರೂ ಬೆಲೆ ಬಾಳುವ 21 ಕೆ.ಜಿ. ತೂಕದ ಸಮಕ್ಷಮ ವಶಕ್ಕೆ ಪಡೆದು ಅವನಿಂದ ಗಾಂಜಾ ವಶಪಡಿಸಿಕೊಂಡಿರುತ್ತಾರೆ.
ಆರೋಪಿ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ. ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀ.ಡಿ.ದೇವರಾಜ , ಐ.ಪಿ.ಎಸ್ . ರವರು ಶ್ಲಾಘಿಸಿರುತ್ತಾರೆ.