ಶ್ರೀನಿವಾಸಪುರ : ತಾಲೂಕಿನಲ್ಲಿ 10 ಲಕ್ಷ ಮೌಲ್ಯದಲ್ಲಿ 20 ಸಮುದಾಯಭವನಗಳನ್ನು ನಿರ್ಮಿಸಲಾಗುವುದು. 2 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಕಾಲೇಜಿಗೆ ಕಾಂಪೌಡ್ನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣ ಪದವಿ ಕಾಲೇಜಿನ ಆವರಣದಲ್ಲಿ 1.80 ಕೋಟಿಯಲ್ಲಿ ನೂತನ 3 ಕೊಠಡಿಗಳ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರವು ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಅಕ್ಷರಸ್ಥನ್ನಾಗಿಸುವ ಉದ್ದೇಶದಿಂದ ಹೆಚ್ಚು ಹೆಚ್ಚು ಉಪಯುಕ್ತ ಯೋಜನೆಗಳ ಮೂಲಕ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದು , ಅವುಗಳನ್ನು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಉಪಯೋಗಿಸುವಂತೆ ಸಲಹೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಆರ್ ಚೌಡರೆಡ್ಡಿ, ಪ್ರಾಂಶುಪಾಲ ಸಣ್ಣವೀರಯ್ಯ, ಉಪನ್ಯಾಸಕರಾದ ಮೃತಂಜಯ್ಯ, ಮಂಜುನಾಥ್ , ನರಸಿಂಹಮೂರ್ತಿ, ರೇಣುಕ, ಸತೀಶ್, ಭಾಸ್ಕರರೆಡ್ಡಿ, ಮಣಿ, ಕಛೇರಿ ವ್ಯವಸ್ಥಾಪಕ ವಿಜಯಕುಮಾರ್, ಮುಖಂಡರಾದ ಮನು, ಡಿ.ಎಸ್.ಶಂಕರರೆಡ್ಡಿ ಇದ್ದರು.