ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ವೀಕ್ಷಿಸಲು ಬಂದ ಹಿರಿಯ ಸಹಾಯಕ ತೋಟಗಾರಿಕೆ ಸಹಾಯಕ ನಿರ್ದೇಶಕರು ಎಂ.ಶ್ರೀನಿವಾಸನ್.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಆರ್ಭಟಿಸಿ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದು ಸರ್ಕಾರ ದಿಂದ ಬೆಳೆ ಹಾನಿಗೆ ಪರಿಹಾರ ಘೋಷಣೆಯಾಗಿದ್ದು, ಹಾನಿಗೊಳಗಾದ ಬೆಳೆ ಗಳನ್ನು ವೀಕ್ಷಿಸಲುಶ್ರೀನಿವಾಸಪುರ ತಾಲ್ಲೂಕು ಹಿರಿಯ ತೋಟಗಾರಿಕೆ ನಿರ್ದೇಶಕರಾದ ಎಂ.ಶ್ರೀನಿವಾಸನ್, ಹಾಗೂ ತೋಟಗಾರಿಕೆ ಸಹಾಯಕರಾದ ಗಾಂಡ್ಲಾಹಳ್ಳಿ ಎನ್. ಮಂಜುನಾಥ್ ರವರುಗಳು ಕಸಬಾ ಹೋಬಳಿ ನಂಬಿಹಳ್ಳಿ ಗ್ರಾಮ ಪಂಚಾಯತಿವ್ಯಾಪ್ತಿಯ ವೈ.ಹೊಸಕೋಟೆ, ಶೆಟ್ಟಿ ಹಳ್ಳಿ , ಅಗ್ರಹಾರ ಸುತ್ತ ಮುತ್ತುಲ ಗ್ರಾಮ ಗಳಲ್ಲಿಬೆಳೆ ಹಾನಿಗೊಳಗಾದ ರೈತ ರನ್ನು ಸಂಪರ್ಕಿಸಿ ಸರ್ಕಾರ ದಿಂದ ಬರುವ ನಷ್ಟ ಪರಿಹಾರ ಪಡೆಯಲು ಅರ್ಜಿ ಯನ್ನು ನೀಡಲು ರೈತರಲ್ಲಿ ಮನವಿ ಮಾಡಿದರು.
