ಶ್ರೀನಿವಾಸಪುರ : ಲೋಕ ಕಲ್ಯಾಣರ್ಥವಾಗಿ ಎರಡನೇ ವಾರ್ಷಿಕೋತ್ಸವವದ ಅಂಗವಾಗಿ ಶ್ರೀದೇವಿ ಭೂದೇವಿ ಸಮೇತ ಶ್ರೀನಿವಾಸಕಲ್ಯಾಣೋತ್ಸವವನ್ನು ಅ.೨೬ ಶನಿವಾರ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ರೂವಾರಿ ಹೂಹಳ್ಳಿ ಅಂಬರೀಶ್ ಮಾಹಿತಿ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕಿನ ಹೂಹಳ್ಳಿ ಗ್ರಾಮದಲ್ಲಿ ನಾನಪ್ಪ ಕುಟುಂಬದವರಿಂದ ಲೋಕಕಲ್ಯಾಣರ್ಥವಾಗಿ ತಿರುಪತಿ ತಿರುಮಲದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶುಕ್ರವಾರ, ಶನಿವಾರ ಅಯೋಜಿಸಲಾಗಿದೆ .
ಇದರ ಸಲುವಾಗಿ ಅ.೨೫ ರ ಶುಕ್ರವಾರ ರಾತ್ರಿ ೮ ಗಂಟೆಗೆ ಹೋಳರು ಜನಪ್ರಿಯ ಕರಗದಮ್ಮ ಕಲಾ ಸಂಸ್ಥೆ, ಸಮೃದ್ಧಿ ನಾಟ್ಯ ಭೂಮಿ ಸಾಂಸ್ಕೃತಿಕ ವೇದಿಕೆ, ಈಶ ನಾಟ್ಯ ಕಲಾ ಅಕಾಡೆಮಿ ರವರಿಂದ ಭರತನಾಟ್ಯ, ಅಖಂಡ ಭಜನೆ, ಚಕ್ಕಲ ಕೋಲಾಟ, ಸಾಂಕಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ೨೬ ರ ರಂದು ೬ ಗಂಟೆಗೆ ವೆಂಕಟೇಶ್ವರ ಸುಪ್ರಭಾತ, ಹೂಮಾಲೆ ಸೇವೆ ಅರ್ಚನೆ, ಸ್ವಾಮಿಯವರಿಗೆ ನೈವೇದ್ಯ, ಪಂಚಾಮೃತ ಅಭಿಷೇಕ, ೧೦ ಗಂಟೆಯಿAದ ೧೨.೩೦ ಗಂಟೆಗೆ ಸ್ವಾಮಿಗೆ ಶಾಂತಿ ಕಲ್ಯಾಣೋತ್ಸವ, ಮ.೩.೩೦ ಕ್ಕೆ ಉಯ್ಯಾಲೆ ಸೇವೆ, ೫-೩೦ ವರೆಗೆ ವೇದನಾದ ಗಾನ ನಡೆಯಲಿದೆ. ಧಾರ್ಮಿಕ ಪೂಜಾಕಾರ್ಯಕ್ರಮವನ್ನು ವೇದ ಪಡಿಂತರಾದ ಎಂ.ಭಾಸ್ಕರ್ಶರ್ಮ, ಮುರಳಿ ಕೃಷ್ಣಮಾಚಾರ್ ನೆರವೇರಿಸಲಿದ್ದಾರೆ.
ಶನಿವಾರ ಮಧ್ಯಾಹ್ನ ಐದುಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಾಲೂಕಿನ ಸಮಸ್ತ ನಾಗರೀಕರು ಪಾಲ್ಗುಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೂ ಹಳ್ಳಿ ಕುಮಾರ್, ಮೊಗಲಹಳ್ಳಿ ಶಿವಪ್ಪ,ನವೀನ್ ಕುಮಾರ್,ಮುಯಪ್ಪ, ಶಿವಣ್ಣ, ಮಂಜುನಾಥ್, ಆಂಜಪ್ಪ,ಮುನೇಗೌಡ, ಶ್ರೀನಿವಾಸ್ ಗೌಡ, ರಾಮಪ್ಪ, ಗಂಗಮ್ಮ, ಮಂಜುಳಮ್ಮ, ಉಪಸ್ಥಿತರಿದ್ದರು.