ರೋಟರಿ ಸೆಂಟ್ರಲ್‍ನಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸರ್‍ಎಂ.ವಿಶ್ವೇಶ್ವರಯ್ಯನವರ ಆದರ್ಶ ಪಾಲಿಸಲು ಶ್ರೀನಾಥ್ ಕರೆ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ:- ನಮ್ಮ ನಾಡಿನ ಹೆಮ್ಮೆಯ ಪುತ್ರ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ನಮಿಸೋಣ ಅವರು ಕಲಿಸಿಕೊಟ್ಟು ಶ್ರಮ ಪ್ರಾಮಾಣಿಕತೆಯ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡುವತ್ತ ಚಿಂತಿಸೋಣ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ತಿಳಿಸಿದರು .
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿಂದು ಕೋಲಾರ ರೋಟರಿ ಸೆಂಟ್ರಲ್ ಮತ್ತು ಜಿಲ್ಲಾ ಭಾರತ ಸೇವಾದಳ ಏರ್ಪಡಿಸಿದ್ದ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾನಿಟೈಸರ್ ಮಾಸ್ಕ್‍ಗಳನ್ನು ನೀಡಿ ಅವರು ಮಾತನಾಡುತ್ತಿದ್ದರು
ಕರುನಾಡಿನ ಹೆಮ್ಮೆಯ ಪುತ್ರರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ದೇಶದ ಶ್ರೇಷ್ಠÀ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಆಗಿದ್ದ ಅವರ ಕೌಶಲ್ಯ ದೂರದರ್ಶಿತ್ವದ ಯೋಜನೆಗಳು ಎಂದಿಗೂ ಶಾಶ್ವತ ಎಂದರು. ಜ್ಞಾನ ಎಲ್ಲವೂ ಅದ್ಭುತ ನಮ್ಮ ನೆಲದ ಸಾಕ್ಷಿಪ್ರಜ್ಞೆ ಯಾಗಬೇಕಿದ್ದ ರವರು. ಅವರ ಜೀವನ ಆದರ್ಶ ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು
ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಮನಸ್ಸು ಮತ್ತು ಸಂತೋಷ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ನೀವೇ ಯೋಚಿಸಿ ಮತ್ತು ಜೀವನವನ್ನು ರೂಪಿಸಿ ಎಂದು ತಿಳಿಸಿದ ವಿಶ್ವೇಶ್ವರಯ್ಯ ರವರ ಆದರ್ಶಗಳು ಯುವ ಜನಾಂಗ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದರು .
ನಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು ಹಾಗಾಗಿ ಇಂಜಿನಿಯರ್‍ಗಳ ಶಿಲ್ಪಿ ಎಂದು ಖ್ಯಾತರಾಗಿದ್ದ ಮೈಸೂರು ದಿವಾನ್ ಸರ್ ಎಂ ವಿಶ್ವೇಶ್ವರಯ್ಯ ಅವರು ನಮ್ಮ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್ ತಿಳಿಸಿದರು .
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ ಹಣದಿಂದ ಖರೀದಿಸಬಹುದಾದ ಅಥವಾ ಅಳೆಯುವಂತಹದ್ದನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಸಾಧಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು. ಈಗಾಗಲೇ ನಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೋವಿಡ್‍ಗೆ ಸಂಬಂಧಪಟ್ಟ ಸಲಕರಣೆ ವಸ್ತುಗಳನ್ನು ರೋಟರಿ ಸೆಂಟ್ರಲ್ ನೀಡುತ್ತಿದೆ ಎಂದು ತಿಳಿಸಿದರು . ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಕೆ. ಸುನಂದಮ್ಮ ವಹಿಸಿದ್ದು. ಭಾರತ ಸೇವಾದಳದ ಸಂಘಟಕ ದಾನೇಶ್, ರೋಟರಿ ಸೆಂಟ್ರಲ್ ನಿರ್ದೇಶಕರಾದ ಕದಂಬ ಸೋಮಶೇಖರ್ ಶಾಲಾ ಅಧ್ಯಾಪಕರುಗಳಾದ ಲೋಕೇಶಪ್ಪ ದಟ್ಟರ, ಭಾಗ್ಯ ,ಸಂತೋಷಕುಮಾರಿ, ಕೆ ನಾರಾಯಣ ರೆಡ್ಡಿ, ಕೆ.ವಿ.ಪ್ರಭಾವತಿ, ಪ್ರಮೀಳಾ, ಫರಿದಾ ಬೇಗಂ ಸಿಬ್ಬಂದಿ ಮತ್ತಿತರರು ಹಾಜರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಮಾಸ್ಕ್ ಗಳನ್ನು ವಿತರಿಸಲಾಯಿತು.