ಹೆಮ್ಮಾಡಿ, ಜ.29; ಫೆಬ್ರವರಿ 4 ರಿಂದ ಫೆ 6ರ ತನಕ. ಶ್ರೀ ಕುಪ್ಪಣ್ಣ ಹಾಯ್ಗೂಳಿ ಜಟ್ಟಿಗ ಹಾಗೂ ಸಪರಿವಾರ ದೈವಸ್ಥಾನ ಕಟ್ಟು, ಸುಳ್ಸೆ,ಹೆಮ್ಮಾಡಿ. ಇದರ ಮಹಾ ಘಂಟೆ ಲೋಕಾರ್ಪಣೆ ಮತ್ತು ಮಹಾ ಕುಂಭಾಭಿಷೇಕ ಹಾಗೂ ವಾರ್ಷಿಕ ಹೂವಿನ ಪೂಜಾ ಕಾರ್ಯಕ್ರಮ ಫೆಬ್ರವರಿ 4 ರಿಂದ ಫೆ 6ರ ತನಕ ನಡೆಯಲಿರುವುದು
ಫೆ, 4ರ ಮಂಗಳವಾರದಂದು ಮಹಾ ಗಂಟೆಯ ಪುರಾ ಮೆರವಣಿಗೆಯು ಹೆಮ್ಮಾಡಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದಿಂದ ಮಧ್ಯಾಹ್ನ ಗಂಟೆ 3:30ಕ್ಕೆ ಹೊರಡಲಿರುವುದು ರಾತ್ರೆ ಗಂಟೆ 7:30 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲೆ ಮಕ್ಕಳಿಂದ ನೃತ್ಯ ವೈಭವ ರಾತ್ರಿ ಗಂಟೆ 10ಕ್ಕೆ ಸರಿಯಾಗಿ ಮನು ಹಂದಾಡಿ ಮತ್ತು ತಂಡದರಿಂದ ಈ ವರ್ಷದ ಹೊಸ ಕಥಾ ಹಂದರ “ನಗೆ ಹಬ್ಬ “ಜರಗಲಿರುವುದು
ಬೆಳಿಗ್ಗೆ 9ಕ್ಕೆ ಸರಿಯಾಗಿ ಧಾರ್ಮಿಕ ಪೂಜಾ ಕಾರ್ಯದೊಂದಿಗೆ “ಮಹಾ ಘಂಟೆ”ಯು ಲೋಕಾರ್ಪಣೆಗೊಳ್ಳಲಿರುವುದು ಮಧ್ಯಾಹ್ನ ಗಂಟೆ 12:30 ಕ್ಕೆ ಸರಿಯಾಗಿ ಅನ್ನ ಸಂತರ್ಪಣೆ ಹಾಗೂ ರಾತ್ರಿ ಗಂಟೆ ಏಳಕ್ಕೆ ಸರಿಯಾಗಿ ಬ್ರಹ್ಮ ಕುಂಭಾಭಿಷೇಕ ಜರಗಲಿರುವುದು
ಫೆ :6ರ ಗುರುವಾರದಂದು ವಾರ್ಷಿಕ ಹೂವಿನ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಗಂಟೆ 7:30ಕ್ಕೆ ಸರಿಯಾಗಿ ಕಮಲ ಶಿಲೆ ಮೇಳದವರಿಂದ ಕಾಲಮಿತಿ ಯಕ್ಷಗಾನ ಬಯಲಾಟ” ಶ್ರೀದೇವಿ ಮಹಾತ್ಮೆ” ಪ್ರದರ್ಶನಗೊಳ್ಳಲಿರುವುದು.
ಈ ಎಲ್ಲಾ ಕಾರ್ಯಕ್ರಮಕ್ಕೂ ಕುಪ್ಪಣ್ಣಾಯಿಗುಳಿ ದೈವಸ್ಥಾನದ ಪದಾಧಿಕಾರಿಗಳು ಮತ್ತು ಊರ ಭಕ್ತಾದಿಗಳು ಸವಿನಯ ಆಮಂತ್ರಣ ನೀಡಿ ತಮ್ಮನ್ನು ಸ್ವಾಗತಿಸುತ್ತಿದ್ದಾರೆ.