

ಹೆಬ್ರಿ : ತನಿಯಜ್ಜ ಮತ್ತು ಮಂತ್ರದೇವತೆ ಟ್ರಸ್ ರಿ. ಮುಳ್ಳುಗುಡ್ಡೆ ಶಿವಪುರ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಹಕಾರದಲ್ಲಿ ದಿನಾಂಕ 30/06/2024 ಆದಿತ್ಯವಾರ ಶ್ರೀ ಕೊರಗಜ್ಜ ಕ್ಷೇತ್ರ ಮುಳ್ಳುಗುಡ್ಡೆ ಹೆಬ್ರಿ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಚ್ .ಅಶೋಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುನೀತ್ ಶೆಟ್ಟಿ, ಆಡಳಿತ ಮೊಕ್ತೆಸರರು ಶ್ರೀ ಕೊರಗಜ್ಜ ಕ್ಷೇತ್ರ ಮುಳ್ಳುಗುಡ್ಡೆ ಹೆಬ್ರಿ, ಡಾ. ಮಂಜುಶ್ರೀ, ವೈದ್ಯರು, ರಕ್ತನಿಧಿ ವಿಭಾಗ ಜಿಲ್ಲಾ ಆಸ್ಪತ್ರೆ ಉಡುಪಿ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರೋಷನ್ ಶೆಟ್ಟಿ ಕುಚ್ಚೂರು, ಸಂತೋಷ್ ಆಚಾರ್ಯ ಕಡ್ತಲ, ಶೇಖರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 94 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.



