ಶ್ರೀನಿವಾಸಪುರ : ಜಾಗತಿಕವಾಗಿ ಆಹಾರ ಭದ್ರತೆಯ ಮೂಲ ಪರಿಕಲ್ಪನೆಯು ಎಲ್ಲಾ ಜನರು , ಎಲ್ಲಾ ಸಮಯದಲ್ಲೂ ತಮ್ಮ ಸಕ್ರಿಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಬೇಕಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಕೆ.ಸಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಂಡ್ಯಾಲ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶನಿವಾರ 2024-25 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಸುಧಾರಿತ ಕೃಷಿ ವಿಸ್ತರಣಾ ಸೇವೆಗಳು, ತಂತ್ರಜ್ಞಾನ ವರ್ಗಾವಣೆ ಮತ್ತು ವಿಕೇಂದ್ರೀಕೃತ ಯೋಜನೆಗಳ ಅಗತ್ಯವನ್ನು ಸಮಿತಿಯ ಗಮನ ಸೆಳೆದಿದೆ.
ಪ್ರದೇಶ ವಿಸ್ತರಣೆ ಮತ್ತು ಉತ್ಪಾದಕತೆಯ ವರ್ಧನೆಯ ಮೂಲಕ ಉದ್ದೇಶಿತ ಬೆಳೆಗಳ ಉತ್ಪಾದನೆಯಲ್ಲಿ ಸಮರ್ಥನೀಯವಾಗಿ ಹೆಚ್ಚಳ ಮಾಡಿಕೊಳ್ಳಬೇಕು. ವೈಯಕ್ತಿಕ ಕೃಷಿ ಮಟ್ಟದಲ್ಲಿ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯ ಮರುಸ್ಥಾಪನೆ. ಪ್ರದೇಶ ವಿಸ್ತರಣೆ ಮತ್ತು ಉತ್ಪಾದಕತೆಯ ವರ್ಧನೆಯ ಮೂಲಕ ಉದ್ದೇಶಿತ ಬೆಳೆಗಳ ಉತ್ಪಾದನೆಯಲ್ಲಿ ಸಮರ್ಥನೀಯವಾಗಿ ಆಧುನಿಕ ವೈಜ್ಞಾನ ಪದ್ದತಿಯಲ್ಲಿ ಹೆಚ್ಚಳ ಮಾಡಿಕೊಳ್ಳಬೇಕು.
ಇದರಿಂದ ವ್ಯಯಕ್ತಿಕ ಕೃಷಿ ಮಟ್ಟದಲ್ಲಿ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯ ಮರುಸ್ಥಾಪನೆ ಕೃಷಿ ಮಟ್ಟದ ನಿವ್ವಳ ಆದಾಯದಲ್ಲಿ ಏರಿಕೆ ಆಗುತ್ತದೆ. ಆದ್ದರಿಂದ ರೈತರು ಕೃಷಿ ಇಲಾಖೆಯ ಮಾರ್ಗದರ್ಶನದಂತೆ ಪ್ರದೇಶಕ್ಕೆ ತಕ್ಕಂತೆ ನೂತನ ಕೃಷಿ ಪದ್ದಂತಿಯಂತೆ ಬೇಸಾಯ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿ, ಇದೇ ಸಮಯದಲ್ಲಿ ಬೆಳೆಗಳಿಗೆ ಸಿಂಪಡಣೆಗಾಗಿ ಉಚಿತವಾಗಿ ಔಷಧಿ ವಿತರಿಸಿದರು.
ರಾಯಲ್ಪಾಡು ಹೋಬಳಿ ಕೃಷಿ ಅಧಿಕಾರಿ ಮಂಜುನಾಥ್, ಫೀಲ್ಡ್ ಆಫೀಸರ್ ವೆಂಕಟರಾಮರೆಡ್ಡಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಸದಸ್ಯ ಸಿ.ಎಲ್.ಶ್ರೀನಿವಾಸರೆಡ್ಡಿ ಗ್ರಾಮದ ಮುಖಂಡ ವೆಂಕಟರಮಣಾರೆಡ್ಡಿ ಹಾಗು ರೈತರು ಇದ್ದರು.