ಭಗಿನಿ ಮೇರಿ ಅನಿಸೆಟಾ ಎಸಿ (85), ಶುಕ್ರವಾರ, ಅಕ್ಟೋಬರ್ 20, 2023 ರಂದು ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಷನ್ ಕಾನ್ವೆಂಟ್‌ನಲ್ಲಿ ನಿಧನರಾದರು. ಅವರು ಬೆಳ್ಳೂರು ಮೂಲದವರಾಗಿದ್ದು, ಅವರ ಮೂಲ ಹೆಸರು ಬೆನಿಟಾ ಸೆಲೆಸ್ತಿನಾ ರೊಡ್ರಿಗಸ್ ಆಗಿದ್ದು, ಅವರು ದಿವಂಗತ ಸಂತಾನ್ ರೋಡ್ರಿಗಸ್ ಮತ್ತು ದಿವಂಗತ ಮೊರ್ನೆಲ್ ಪಿರೇರಾ ಅವರ ಪುತ್ರಿಯಾಗಿದ್ದರು.
ಅವರ ಪಾರ್ಥಿವ ಶರೀರವನ್ನು ಅಕ್ಟೋಬರ್ 22 ರಂದು ಭಾನುವಾರ ಮಧ್ಯಾಹ್ನ 1.00 ಗಂಟೆಯಿಂದ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಅನನ್ಸಿಯೇಶನ್ ಕಾನ್ವೆಂಟ್ ಚಾಪೆಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ನಂತರ ಲೇಡಿಹಿಲ್ ಕಾನ್ವೆಂಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆಯು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.
ಅವರು ಕರ್ನಾಟಕ ಪ್ರಾಂತ್ಯದ ಅಪೋಸ್ತಲಿಕ್ ಕಾರ್ಮೆಲ್ ಸಭೆಗೆ ಸೇರಿದರು ಮತ್ತು ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಮತ್ತು ಮುಖ್ಯೋಪಾಧ್ಯರಾಗಿ ಸೇವೆ ಸಲ್ಲಿಸಿದ್ದರು ಪ್ರಾಥಮಿಕ ಹಂತದಲ್ಲಿ ಬಡ ಮಕ್ಕಳಿಗೆ ವಿಶೇಷವಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕುಂದಾಪುರದ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿರುವಾಗ, ಅವರಿಗೆ ಸರಕಾರಿ ಶಿಕ್ಷಕಿಯರ ಉದ್ಯೋಗ ಸಿಗುವ ಮೊದಲೇ ಸಂತ ಮೇರಿ ಪ್ರಾಥಮಿಕ ಕನ್ನಡ ಮಾದ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಆರಂಭಿಸಿದ್ದರು.ಅವರು ತಮ್ಮ ಸಮರ್ಪಿತ ಸೇವೆಗಳನ್ನು ಸಲ್ಲಿಸಿದ್ದು, ಅವರೊಬ್ಬ ಉತ್ತಮ ಶಿಕ್ಷಕಿಯಾಗಿದ್ದುದು ಅಲ್ಲದೆ ಒಳ್ಳೆಯ ಸಂಗೀತಗಾರಾಗಿದ್ದರು ವಿದ್ಯಾರ್ಥಿಗಳ ಮೇಲೆ ಅತೀವ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಅವರ ಬಾಳಿನ ಕೊನೆಯಲ್ಲಿ ಕೂಡ ವಿದ್ಯಾರ್ಥಿಗಳಿಗಾಗಿ ಕನವರಿಸಿಕೊಳ್ಳುತಿದ್ದರು ಎಂದು ಅವರ ಜೊತೆಯಲ್ಲಿದ್ದವರು ಹೇಳಿಕೊಳ್ಳುತ್ತಾರೆ.
ಅವರು ಸಂತ ಜೋಸೆಫ್ ಹಿರಿಯ ಪ್ರಾರ್ಥಮಿಕ ಶಾಲೆ ಗಂಗೂಳ್ಳಿ; ಕಾರ್ಮೆಲ್ ಕಾನ್ವೆಂಟ್, ಹಳಿಯಾಳ; ಸ್ಟೆಲ್ಲಾ ಮಾರಿಸ್ ಕಾನ್ವೆಂಟ್, ಕೋಟೆಕಾರ್; ಸೇಂಟ್ ಆಗ್ನೆಸ್ ಕಾನ್ವೆಂಟ್, ಬೆಂದೋರ್; ಸೇಂಟ್ ಜೋಸೆಫ್ ಕಾನ್ವೆಂಟ್, ಮೈಸೂರು; ಶಾಂತಿ ನಿಲಯ, ನಂಜನಗೂಡು ಮತ್ತು ಅನನ್ಸಿಯೇಷನ್ ಕಾನ್ವೆಂಟ್, ಲೇಡಿಹಿಲ್, ಮಂಗಳೂರು. ಇಲ್ಲಿ ಸೇವೆ ನೀಡಿದ್ದಾರೆ.
ಸಂಪರ್ಕಕ್ಕೆ : 0824-2456851, 94814 60926
ಶ್ರದ್ದಾಂಜಲಿ ಸಿಸ್ಟರ್ ಮೇರಿ ಅನಿಸೆಟಾ ಎಸಿ ಅವರು ಕುಂದಾಪುರ ಸಂತ ಮೇರಿ ಶಾಲೆಯಲ್ಲಿ ಕಲಿಸುತ್ತೀರುವಾಗ, ನಾನು, ಬರ್ನಾಡ್ ಡಿ’ಕೋಸ್ತಾ ಅವರ ಶಿಸ್ಯನಾಗಿದ್ದೆ. ಹಾಗೇ ನನ್ನ ಪತ್ನಿ ವಿನಯಾ ಡಿ’ಕೋಸ್ತಾ ಇವರಿಗೂ ಅವರು ಕಲಿಸಿದ್ದಾರೆ. ಉತ್ತಮ ಶಿಕ್ಷಕಿಯಾಗಿದ್ದ ಅವರಿಗೆ ಗೌರವಪೂರ್ವಕವಾಗಿ ನಮಿಸಿ, ಆವರ ಆತ್ಮಕ್ಕೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತಾ, ಜನನುಡಿ.ಕಾಮ್ ಸಂಪಾದಕನಾದ ನಾನು ಸಿಸ್ಟರ್ ಮೇರಿ ಅನಿಸೆಟಾ ಅವರಿಗೆ ಪ್ರೀತಿಪೂರ್ವಕ ಶ್ರದ್ದಾಂಜಲಿಯನ್ನು ಅರ್ಪಿಸುತ್ತೇನೆ
Sr. Mary Aniceta AC (86) passed away in Mangalore
Sister Mary Aniceta AC (85), passed away on Friday, October 20, 2023 at Annunciation Convent, Ladyhill, Mangalore. She hails from Bellur and her original name is Benita Celestina Rodriguez, daughter of late Santhan Rodriguez and late Mornel Pereira.
His mortal remains will be laid for public viewing at Annunciation Convent Chapel, Ladyhill, Mangalore on Sunday, October 22 from 1.00 pm. Interment to follow at Ladyhill Convent Cemetery at 3.30pm.
She joined the Apostolic Carmel Congregation in Karnataka Province and served as a teacher and headmaster in several schools specially serving poor children at the primary level. While she was in St. Joseph’s Convent, Kundapur, she started serving as a teacher in Saint Mary’s Primary Kannada Medium School before she got a job as a government teacher. Even at the last days of her life, she dreamed for students.
She served as a teacher at Saint Joseph’s higher Primary School, Ganguli; Carmel Convent, Haliyala; Stella Maris Convent, Kotekar; St Agnes Convent, Bendore; St. Joseph’s Convent, Mysore; Shanti Nilaya, Nanjangudu and Annunciation Convent, Ladyhill, Mangalore. Served here.
Tribute
I, Bernard D’Costa, was a student of Sister Mary Aniceta AC when she was teaching at Saint Mary’s School, Kundapur. He also taught my wife Vinaya D’Costa. I, the Editor of Jananudi.com, pay my loving tribute to Sister Mary Aniceta, bowing respectfully to her great teacher, and praying for God to rest her soul.