

ಕೋಲಾರ,ಆ,9: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಎಸ್.ಮುರಳೀಧರ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಮತಿ ವಾಣಿಶ್ರೀ ಎಸ್.ಎನ್ ಅವರ ಹಿರಿಯ ಪುತ್ರಿ ಕುಮಾರಿ ಸ್ಪೂರ್ತಿ ಅವರು ಭಾರತೀಯ ಕಂಪೆನಿ ಸಚಿವರ ಸಂಸ್ಥೆ ಆಯೋಜಿಸಿದ್ದ 21ನೇ ಅಖಿಲ ಭಾರತ ಚರ್ಚಾ ಸ್ಪರ್ಧಾ ಕೂಟದಲ್ಲಿ ರಾಜ್ಯಮಟ್ಟ, ದಕ್ಷಿಣ ಭಾರತ ವಿಭಾಗ ಮಟ್ಟದಲ್ಲಿ ವಿಜೇತರಾಗಿ ಜುಲೈ 30ನೇ ತಾರೀಖು ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಭಾರತವನ್ನು ಪ್ರತಿನಿಧಿಸಿ, “ಇಂಡಿಯಾ ಅಟ್ 75- ಹೆಡಿಂಗ್ ಟುವಡ್ರ್ಸ್ USಆ 5 ಟ್ರಿಲಿಯನ್ ಎಕಾನಮಿ” ವಿಷಯದ ಕುರಿತಾಗಿ ತಮ್ಮ ವಾದ ಮಂಡಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
