

ಭಾರತದ ಮುಸ್ಲೀಂ ಜನಸಂಖ್ಯೆಯನ್ನು ಸುಳ್ಳು ಸುದ್ದಿ ಪ್ರಚಾರ ಮಾಡಿ,ಮತ್ತು ಪಾಕಿಸ್ಥಾನದ ದ್ವಜವನ್ನು ಮುಸ್ಲೀಂರಿಗೆ ಹೊಲಿಸಿ, ಕೋಮುದ್ವೇಷ ಹರಡಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ನಿರುದ್ದ ಇವತ್ತು ಉಡುಪಿ ಜಿಲ್ಲೆಯ ಕುಂದಾಪುರ ಪೋಲಿಸ್ ಠಾಣೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ ಇವರ ನೇತೃತ್ವದಲ್ಲಿ ದೂರು ದಾಖಲಿಸಲಾಯಿತು .ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಅಬು ಮೊಹಮ್ಮದ್,ಮುಸ್ಲೀಂ ಒಕ್ಕೂಟ ಇದರ ಉಪದ್ಯಕ್ಷರುಗಳಾದ ರಫೀಕ್ ಗಂಗೊಳ್ಳಿ,ಹನೀಫ್ ಗುಲ್ವಾಡಿ,ಕಾಂಗ್ರೆಸ್ ಮುಖಂಡರಾದ ಸೈಯ್ಯದ್ ಯಾಸೀನ್ ಹೆಮ್ಮಾಡಿ,ಪತ್ರಕರ್ತರಾದ ಮುನಾಫ್ ಇವರೆಲ್ಲರು ಉಪಸ್ಥಿತರಿದ್ದರು