

ಕೋಟ-ಯುವ ಕ್ರಿಕೆಟಿಗ,ಕ್ರೀಡಾ ಸಂಘಟಕ ನಿತೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಪಾಂಚಜನ್ಯ ಟ್ರೋಫಿ-2023 ಇತ್ತೀಚಿಗೆ ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಜರುಗಿತು. ಕುಂದಾಪುರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕಿನಲ್ಲಿ ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಸಮರ್ಥವಾಗಿ ನಿಭಾಯಿಸುತ್ತಾರೆ. ಪಾಂಚಜನ್ಯದ ನಿತೇಶ್ ಶೆಟ್ಟಿ ಉತ್ತಮ ಸಂಘಟಕರು, ಕ್ರಿಕೆಟ್ ಗೆ ಹೊಸ ಆಯಾಮ ನೀಡುವದರಲ್ಲಿ ನಿಸ್ಸೀಮರು.ಈ ಬಾರಿಯೂ ಪಂದ್ಯಾವಳಿಗೆ ಹೊಸ ಸ್ಪರ್ಶ ನೀಡಿದ್ದಾರೆ.” ಸಂಘಟಕರಾದ ನಿತೇಶ್ ಹಾಗೂ ಪಾಂಚಜನ್ಯದ ತಂಡವನ್ನು ಅಭಿನಂದಿಸಿ ಶುಭ ಹಾರೈಸಿದರು.

