

ಕುಂದಾಪುರ: ಅ:06: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್&ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ “ಐಕ್ಯಂ”ನ ಅಂಗವಾಗಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು.
ಟಾರ್ಪಿಡೋಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಗೌತಮ್ ಶೆಟ್ಟಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡೆಯಲ್ಲಿಯೂ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮನ್ನು ನಾವು ಮೊದಲು ಪ್ರೀತಿಸಿದರೆ ಜೀವನದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದು.“ಎಲ್ಲವೂ ಸಾಧ್ಯ ಆದರೆ ಸುಲಭವಲ್ಲ”. ಮೊದಲು ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ನಮ್ಮಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಾವು ನಿತ್ಯವೂ ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ತೃಪ್ತಿ ಇರಬೇಕು.ಮುಂದೊಂದುದಿನ ನಾನು ಇನ್ನೂ ಉತ್ತಮವಾಗಿ ಆಡಬಹುದಿತ್ತು ಎನ್ನುವ ಆಲೋಚನೆ ನಮ್ಮಲ್ಲಿ ಬರಬಾರದು. ಸೋಲು ಗೆಲುವು ನಮ್ಮ ಬದುಕಿನ ಒಂದು ಭಾಗ, ಮರಳಿ ಪ್ರಯತ್ನವನ್ನು ನಾವು ಮಾಡಲೇಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್ ಇವರು“ಕ್ರೀಡೆ ನಮ್ಮಲ್ಲಿನ ದೌರ್ಬಲ್ಯವನ್ನು ತೊರೆಯುವಂತೆ ಮಾಡಿ ಜೀವನದ ಮೌಲ್ಯಗಳನ್ನು ನಮಗೆ ಕಲಿಸುತ್ತದೆ”ಎಂದುತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪ್ರೊ|ಜೆನಿಫರ್ಡ್ ಮಿನೇಜಸ್ ಹಾಗೂ ಐಎಂಜೆಐ ಎಸ್ಸಿಯ ಉಪ ಪ್ರಾಂಶುಪಾಲರಾದ ಪ್ರೊ|ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿ,ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿಸಿಎ ವಿಭಾಗದ ವಿದ್ಯಾರ್ಥಿನಿಯರಾದ ಕು| ಸಿಂಚನ ಸ್ವಾಗತಿಸಿ,ವಂದಿಸಿದರು.ಕು|ಪ್ರತಿಭಾ ಗಣ್ಯರ ಕಿರು ಪರಿಚಯವನ್ನು ಮಾಡಿದರು. ಕು| ಭಾನುಮತಿ ಪ್ರಾರ್ಥಿಸಿದರು.ಕು|ರಶಿತಾ ನಿರ್ವಹಿಸಿದರು.
ದ್ವಿತೀಯ ಬಿ ಸಿ ಎ ವಿಭಾಗದ ವಿದ್ಯಾರ್ಥಿಗಳಾದ ಕು| ನಿರೋಷ ಮತ್ತು ಕು|ನಿತಿನ್ ರವರು ಚಾಂಪಿಯನ್ ಶಿಪ್ ಪಡೆದುಕೊಂಡರು. ಹಾಗೆಯೇ ಓವರಾಲ್ ಚಾಂಪಿಯನ್ಶಿಪ್ ಅನ್ನು ರೆಡ್ ಈಗಲ್ಸ್ ತಂಡಪಡೆದುಕೊಂಡಿತು.
