ಕೋಲಾರ,ಡಿ.18: ಮಕ್ಕಳು ಕ್ರಿಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಸೇವಾದಳ ಜಿಲ್ಲಾ ಗೌರವ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು
ನಗರದ ಪೆÇಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ 19 ನೇ ಅಂತರ ಜಿಲ್ಲಾ ರಾಷ್ಟ್ರೀಯ ಕ್ರೀಡಾಕೂಟದ ಜಿಲ್ಲಾ ತಂಡದ ಆಯ್ಕೆಯ ಕ್ರೀಡಾಕೂಟದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಆದರೆ ನಿಮ್ಮಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಕ್ರಿ?ಡೆಯ ಮಹತ್ವವನ್ನು ತಿಳಿದುಕೊಂಡು ಪ್ರತಿಯೊಬ್ಬರೂ ಭಾಗವಹಿಸಿ ಜಿಲ್ಲೆಯ ಕೀರ್ತಿ ಪತಾಕೆಯ ಜೊತೆಗೆ ಘನತೆ ಗೌರವವನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಪಾಡುವಂತೆ ಆಗಬೇಕು ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಕ್ರೀಡಾಪಟುಗಳನ್ನು ಗುರುತಿಸಬೇಕು ಕ್ರೀಡೆಯನ್ನು ಪೆÇೀತ್ಸಾಹಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಮಿತಿ ಸದಸ್ಯರಿಗೆ ಸ್ವಂತ ಕೆಲಸಗಳು ಇದ್ದರೂ ಸಹ ಇವತ್ತು ನಿಮ್ಮಗಳಿಗಾಗಿ ಕಾರ್ಯಕ್ರಮಗಳು ಹಾಗೂ ಕ್ರಿ?ಡಾ ಚಟುವಟಿಕೆಗಳಿಗೆ ಉತ್ತೆ?ಜನ ನೀಡುತ್ತಿದ್ದಾರೆ ಅವರ ಆಶಯಗಳನ್ನು ಕ್ರೀಡೆಯಲ್ಲಿ ತೋರಿಸಬೇಕು ನೀವು ಎಲ್ಲರೂ ಉತ್ತಮ ಆಟವನ್ನು ಪ್ರದರ್ಶಿಸಬೇಕು ಇಂದಿನ ಆಧುನಿಕ ಯುಗದಲ್ಲಿ ಕ್ರಿ?ಡೆಗಳನ್ನು ಮರೆತು ಮೊಬೆ?ಲ್ ಗೇಮ್ಗಳಿಗೆ ಸೀಮಿತವಾಗಿದ್ದೆ?ವೆ. ಕ್ರಿ?ಡೆಗಳು ಹಾಗೂ ಪಠ್ಯೆ?ತರ ಚಟುವಟಿಕೆಗಳು ನಮ್ಮ ಮಾನಸಿಕ ವಿಕಾಸಕ್ಕೆ ಸಹಕಾರಿಯಾಗುತ್ತವೆ ಎಂಬುದನ್ನು ಯಾರು ಮರೆಯಬಾರದು ಎಂದರು
ಈ ಸಂದರ್ಭದಲ್ಲಿ ಕೋಲಾರ ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಆಯ್ಕೆಯಾಗಲು ಸಾಧ್ಯವಿಲ್ಲ ಸೋಲು ಗೆಲುವು ಸಹಜ ಅದನ್ನು ಸಮಾನವಾಗಿ ಸ್ವೀಕರಿಸಬೇಕು ಸೋಲು ಮುಂದಿನ ಗೆಲುವಿನ ಮೆಟ್ಟಿಲು ರೀತಿಯಲ್ಲಿ ಅವಲೋಕನ ಮಾಡಿಕೊಂಡು ಹಿಂಜರಿತವಿಲ್ಲದೇ ಭಾಗವಹಿಸಬೇಕು ಅವಕಾಶಗಳು ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕ್ರೀಡೆಗೆ ಪೆÇೀತ್ಸಾಹ ಕಡಿಮೆ ಇದ್ದರೂ ಪ್ರತಿಭೆಗಳಿಗೆ ಕೊರತೆಯಿಲ್ಲ ಪ್ರತಿಭೆಗಳಿಗೆ ನಮ್ಮ ಪೆÇೀತ್ಸಾಹ ಯಾವತ್ತೂ ಕಡಿಮೆಯಾಗಲ್ಲ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ಪಡೆದು ಹೆಚ್ಚು ಪದಕಗಳನ್ನು ಗೆದ್ದು ಬನ್ನಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ರಾಜವೇಲು, ಜಿಲ್ಲಾ ಅಧ್ಯಕ್ಷ ಎನ್.ಮುನಿಯಪ್ಪ, ಕಾರ್ಯದರ್ಶಿ ಕೆ.ಆರ್ ರಾಘವೇಂದ್ರ, ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ನಾಥ್, ಬಲಿಜ ಸಂಘದ ಅಶೋಕ್ ಸೇರಿದಂತೆ ಮುಂತಾದವರು ಇದ್ದರು, ಕಳೆದ ಭಾಗವಹಿಸಿ ಪದಕ ಗೆದ್ದ ಕ್ರೀಡಾಪಟುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.