

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವತಿಯಿಂದ ತಾ.11-05-2024 ರಂದು ಮಂಗಳೂರು ಧರ್ಮಪ್ರಾಂತ್ಯದ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಆಧ್ಯಾತ್ಮಿಕ ನಿರ್ದೇಶಕರಾದ ಫಾ.ಡಾ. ಜೆ.ಬಿ. ಸಲ್ಡಾನ್ಹಾರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಪಾನೀರ್ , ಮುಖ್ಯ ಅತಿಥಿಗಳಾಗಿ ವಿಲ್ಮಾ ಮೊಂತೆರೊ ಮತ್ತು ಪ್ರಾನ್ಸಿಸ್ ಮೊಂತೆರೊರವರು ಉಪಸ್ಥಿತರಿದ್ದರು. ಡಾ. ಮಾಲಿನಿ ಹೆಬ್ಬಾಳ್, ಫಾ. ಅಶ್ವಿನ್ ಕಾರ್ಡೊಜಾ (ICYM ನಿರ್ದೇಶಕರು) ಹಾಗೂ ಪೀಟರ್ ಆ್ಯಂಟನಿ ಪಿಂಟೋರವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನೆರವೇರಿಸಿದರು. ಈ ತರಬೇತಿ ಶಿಬಿರದಲ್ಲಿ 35 ಮಕ್ಕಳು ಭಾಗವಹಿಸಿದ್ದರು.