ಕುಂದಾಪುರಃ ಇದೇ ಜನವರಿ 4 ಶನಿವಾರ ಎರಡು ಗಂಟೆಗೆ ಹಟ್ಟಿ ಅಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಎದುರು ಇರುವ ಸಭಾಂಗಣದಲ್ಲಿ ಮಧ್ಯಪಾನದ ಸಮಸ್ಯೆ ಇರುವವರಿಗೆ ಅದನ್ನು ನಿಲ್ಲಿಸುವ ಬಗ್ಗೆ ಹಾಗೂ ಕುಟುಂಬದ ಸದಸ್ಯರು ಇದನ್ನು ನಿಭಾಯಿಸುವ ವಿಶೇಷ ಮಾಹಿತಿ ಸಭೆಯನ್ನು ನಡೆಸಲಾಗುವುದು
ಈ ಮಾಹಿತಿ ಸಭೆಯಲ್ಲಿ ಹಟ್ಟಿ ಅಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಬಾಲಚಂದ್ರ ಭಟ್ಟರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಇಂದಿನ ನಮ್ಮ ಸಮಾಜದಲ್ಲಿ ಹಲವಾರು ಮಂದಿ ಮುಖ್ಯವಾಗಿ ಯುವಜನತೆ ಅಮಲು ಪದಾರ್ಥದ ಸೇವನೆಗೆ ಬಲಿಯಾಗುತ್ತಿದ್ದು ಅವರನ್ನು ಈ ದುಷ್ಟ ಪೀಡೆಯಿಂದ ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು ಅಮಲು ಪದಾರ್ಥದ ಸೇವನೆಗೆ ಬಲಿಯಾದವರಿಗೆ ಸಹಾಯ ಮಾಡಲು ಆಲ್ಕೋಹಾಲಿಕ್ ಅನಾನಿಮಸ್ ಎ ಎ ಸಂಸ್ಥೆ ಸಹಾಯ ಮಾಡುತ್ತಿದ್ದು ಈ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಾಗುವುದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ ಹಾಗೆ ಅದೇ ದಿನ ಗಂಗೊಳ್ಳಿ ಚರ್ಚ್ ವಠಾರದಲ್ಲಿ ಸಂಜೆ 4.30ಕ್ಕೆ ಮಧ್ಯಪಾನ ತ್ಯಜಿಸುವ ಬಗ್ಗೆ ಸಂವಾದ ಸಭೆ ನಡೆಯಲಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೂಜ್ಯ ಗುರು ರೋಷನ್ ಡಿ ಸೋಜರವರು ಭಾಗವಹಿಸಲಿದ್ದು ಆಸುಪಾಸಿನ ಜನರು ಇದರಲ್ಲಿ ಭಾಗವಹಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ರೀತಿಯ ಸಂದಾಯ ಇರುವುದಿಲ್ಲ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ಅನಾಮಿಕತೆಯನ್ನು ಕಾಪಾಡಲಾಗುವುದು
ಹೆಚ್ಚುವರಿ ಮಾಹಿತಿಗಾಗಿ. 9964280840, 9902575471