ಕೋಲಾರ: ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: 01.01.2024 ಕ್ಕೆ ಅನ್ವಯವಾಗುವಂತೆ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಂತೆ (22-01-2024) ಒಟ್ಟು 12,78,183 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಬಾರಿ 33,497 ಯುವ ಮತದಾರರು ನೋಂದಣಿಯಾಗಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಯಾರೂ ಮತದಾನದಿಂದ ವಂಚಿತರಾಗದಂತೆ ಮಾಡಲು ಮನೆ ಮನೆ ಭೇಟಿ ಸಮೀಕ್ಷೆಯನ್ನು ಮಾಡಿ ಎಲ್ಲರಿಗೂ ಮತದಾನ ಹಕ್ಕು ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಿರಂತರ ಪರಿಷ್ಕರಣೆಯ ಅಡಿಯಲ್ಲಿ 28349 ಮತದಾರರನ್ನು ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ ಹಾಗೂ ತಿದ್ದುಪಡಿ ಮಾಡಲು, ನಿಧನ ಹೊಂದಿದ, ಹೆಸರನ್ನು ತೆಗೆದುಹಾಕುವುದು ಅಥವಾ ವರ್ಗಾವಣೆಯಂತಹ ಪ್ರಕರಣದಲ್ಲಿ 19595 ಮತದಾರರನ್ನ ತೆಗೆದು ಹಾಕಲಾಗಿದೆ ಎಂದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಬಿಟ್ಟು ಹೋದವರು ಮತ್ತೆ ನೋಂದಣಿ ಮಾಡಿಕೊಳ್ಳಲು ಸಂಬಂಧಪಟ್ಟ ಮತಗಟ್ಟೆ ಹಂತದ ಅಧಿಕಾರಿಗಳು ಅಥವಾ ತಾಲ್ಲೂಕು ಕಚೇರಿಯಲ್ಲಿ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಜನಸಂಖ್ಯೆ ಅನುಪಾತದಲ್ಲಿ 1000 ಪುರುಷರಿಗೆ, 1020 ಮಹಿಳೆಯರಿದ್ದು ಅಭಿವೃದ್ಧಿಯ ಸಂಕೇತವಾಗಿದೆ. Person with disabled 13487 ಮತದಾರರಿದ್ದಾರೆ ಎಂದರು. ಮತದಾರರ
ದಿನಾಚರಣೆಯೆಂದು ಶತಾಯುಷಿಗಳಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.