ಅಕ್ರಮವಾಗಿ ಮರಳು ತೆಗೆಯುತ್ತಿರುವ ಪಾವುರು ಉಳಿಯ,ರಾಣಿಪುರ, ಉಳ್ಳಾಲ ಹೊಯಿಗೆ ಹಾಗೂ ಮಳವೂರು, ಕೆಂಜಾರು ಪ್ರದೇಶದಲ್ಲಿ ಹಾಗೂ ಹರೇಕಳ ನದಿಯ ನಡುವೆ ಹೊಸತಾಗಿ ನಿರ್ಮಿಸಿದ ಡ್ಯಾಮ್ನ ಬುಡದಲ್ಲಿ ಅಕ್ರಮವಾಗಿ ಮರಳು ತೆಗೆಯುದರಿಂದಾಗಿ ಡ್ಯಾಮ್ ಕುಸಿಯುವುದು ಇದರ ಪರಿಣಾಮವಾಗಿ ದೇವಾಲಯ ಹಾಗೂ ಮನೆಗಳು ಬೀಳುವ ಪರಿಸ್ಥಿತಿಯ ಕುರಿತು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಶ್ರೀ ಯು.ಟಿ ಖಾದರ್ ಹಾಗೂ ದ.ಕ ಜಿಲ್ಲಾಧಿಕಾರಿಗಳಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜರವರ ನಿಯೋಗವು ತಾರೀಕು:30-09-2024ರಂದು ಬೆಳಿಗ್ಗೆ 10.00 ಗಂಟೆಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ ಸೋಜರವರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ತಾನೂ ಈ ನಿಯೋಗದೊಂದಿಗೆ ತಾರೀಕು 28-09-2024 ರಂದು ಉಳಿಯ ಪಾವೂರು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಸ್ವತಃ ವಿಕ್ಷೀಸಿಸಿದ್ದು ಈ ಸಮಸ್ಯೆಗಳನ್ನು ಸವಿಸ್ಥರಾವಾಗಿ ತಿಳಿಸಿರುತ್ತಾರೆ. ಶ್ರೀ ಯು ಟಿ ಖಾದರ್ರವರು ಸಮಸ್ಯೆಯನ್ನು ಆಲಿಸಿ ಈ ಪ್ರದೇಶದಲ್ಲಿ ಅತೀ ಶೀಘ್ರವಾಗಿ ತೂಗು ಸೇತುವೆಯನ್ನು ನಿರ್ಮಿಸುವ ಭರವಸೆಯನ್ನು ನೀಡುವುದರೊಂದಿಗೆ ಈ ಪ್ರದೇಶದ ಸಂಪೂರ್ಣ ಸರ್ವೆಯನ್ನು ನಡೆಸಿ ಅಕ್ರಮವಾಗಿ ಮರಳು ತೆಗೆಯುವ ದಂಧೆಯನ್ನು ನಿಷೇಧಿಸುವ ಭರವಸೆಯನ್ನು ನೀಡಿರುತ್ತಾರೆ. ಜಿಲ್ಲಾಧಿಕಾರಿಯವರು ವಿಧಾನಪರಿಷತ್ತು ಚುನಾವಣೆ ಮುಗಿದ ನಂತರ ಸ್ವತಃ ಈ ಪ್ರದೇಶಕ್ಕೆ ಭೇಟಿ ನೀಡಿ ಹೊಸ ಡ್ಯಾಮ್ನ ಬುಡದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಗಸ್ತು ಹಾಕಿ ಅಲ್ಲಿ ಮರಳು ತೆಗೆಯುದನ್ನು ನಿಷೇಧಿಸುವ ಭರವಸೆ ನೀಡುವುದರೊಂದಿಗೆ ಖಾಸಗಿ ಭೂಮಿಯಲ್ಲಿ ಮರಳು ದಾಸ್ತಾನು ಮಾಡುವುದನ್ನು ನಿಷೇಧಿಸಲಾಗುವುದು. ಈ ಪ್ರದೇಶಕ್ಕೆ ಟಿಪ್ಪರ್ ಹಾಗೂ ಹಿಟಾಚಿ ವಾಹನಗಳನ್ನು ಪ್ರವೇಶ ಮಾಡದಂತೆ ಅಲ್ಲಿ ಜೆ ಸಿ ಬಿ ಯಂತ್ರದ ಮೂಲಕ ಕಂದಕ ನಿರ್ಮಿಸುವುದು, ನದಿಯ ಮಧ್ಯಭಾಗದಲ್ಲಿ ಸಂಚಾರದ ದೋಣಿಗಳನ್ನು ಬಿಟ್ಟು ಇತರ ದೋಣಿಗಳನ್ನು ಮುಟ್ಟುಗೊಲು ಹಾಕುವುದು, ಅಕ್ರಮವಾಗಿ ನಿರ್ಮಿಸಿದ ಶೆಡ್ಡ್ಗಳನ್ನು ತೆರವುಗೊಳಿಸುವುದು, ಅಕ್ರಮವಾಗಿ ಮರಳು ತೆಗೆಯುವವರ ಮೇಲೆ ಪ್ರಕರಣ ದಾಖಲಿಸುವುದು ಈ ಎಲ್ಲಾ ಸಮಸ್ಯೆಗಳನ್ನು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿಯ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿರುತ್ತಾರೆ. ಗುರುವಾರ ತಾರೀಕು: 03-10-2024 ರಂದು ಈ ನಿಯೋಗವು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೊಜರೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಸಭೆಯ ವಿರೋಧ ಪಕ್ಷದ ನಾಯಕರು ,ಸಂಸದರಾದ ಶ್ರೀ ಬ್ರೀಜೆಶ್ ಚೌಟ ಜಿಲ್ಲೆಯ ಶಾಸಕರು, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನರವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು. ಉಪಸ್ಥತಿ: 1 ಶ್ರೀ.ಪಾವ್ಲ್ ರೋಲ್ಪಿ ಡಿ ಕೊಸ್ತಾ- ಮಾಜಿ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) 2.ಶ್ರೀ ಡೊಲ್ಪಿ ಡಿ ಸೋe – ವಲಯ ಅಧ್ಯಕ್ಷರು ದಕ್ಷಿಣ ವಲಯ 3.ಶ್ರೀ ಜೋನ್ ಲಸ್ರಾದೊ – ವಲಯ ಅಧ್ಯಕ್ಷರು ಬಂಟ್ವಾಳ ವಲಯ 4. ಶ್ರೀ ಸಂತೋಷ್ ಡಿ ಸೋe- ವಲಯ ಅಧ್ಯಕ್ಷರು ಪೆಜಾರ್ ವಲಯ 5. ಶ್ರೀ ಫ್ರಾನ್ಸಿಸ್ ಮೊಂತೇರೊ ವಲಯ ಅಧ್ಯಕ್ಷರು ಕಾಸರಗೋಡ್ ವಲಯ 5. ಶ್ರೀ ಸ್ಟ್ಯಾನಿ ಬಂಟ್ವಾಳ್ 6. ಶ್ರೀ ಆಸ್ಟಿನ್ ಲೋಬೊ ವಲಯ ಕಾರ್ಯದರ್ಶಿ ಬಂಟ್ವಾಳ ವಲಯ ಹಾಗೂ ನಾಲ್ಕೂ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.