ಪರಿಶಿಷ್ಟ ನೌಕರರ ಸಮಸ್ಯಗಳಿಗೆ ಪರಿಹಾರ: ಎಂ ಸುನಿತ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ ಮೇ 30 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಕಾರಿ ನೌಕರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಎಂ.ಸುನಿತಾ ತಿಳಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ನೇಮಕಾತಿ ಪತ್ರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರಾಜ್ಯ ಸರ್ಕಾರಿ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ಸಂಘಕ್ಕೆ ಪತ್ರ ಬರೆಯಬಹುದು. ಇಲ್ಲವೇ ನೇರವಾಗಿ ಭೇಟಿ ಮಾಡಬಹುದು. ಅಂತಹ ಸಮಸ್ಯೆಗಳು ಇದ್ದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
. ಎಸ್ಸಿಎಸ್ಟಿ ರಾಜ್ಯ ಸರ್ಕಾರಿ ನೌಕರರನ್ನು ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಘಟನೆ ಮಾಡಲಾಗುವುದು. ಜಿಲ್ಲೆಯಾದ್ಯಂತ ಇರುವ ಮಹಿಳಾ ನೌಕರರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವಪ್ರಯತ್ನ ಮಾಡಲಾಗುವುದು ಎಂದರು. ಈಗಾಗಲೇ ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆಯಲ್ಲಿ ಸಭೆ ನಡೆಸಲಾಗಿದೆ. ಜಿಲ್ಲೆಯಾದ್ಯಂತ ಮುಖಂಡರ ನೇಮಕ ಮಾಡಿ, ಸಭೆ ನಡೆಸಿ, ಎಲ್ಲ ತಾಲೂಕುಗಳಿಗೂ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಸಮಸ್ಯೆಗಳನ್ನು ಕ್ರೋಡೀಕರಿಸಿ ಪರಿಹರಿಸುವ ಮಹದಾಸೆ ಇದೆ. ಸಂಘಟನೆ ಯಾರ ವಿರುದ್ಧವೂ ಅಲ್ಲ’ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ಬರೆದಂತಹ ಅಂಬೇಡ್ಕರ್‍ರವರ ಸಮಾಜದವರಾದ ನಾವು ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರು ಸಮಾಜ ಕಟ್ಟುವ ಛಲದೊಂದಿಗೆ ಮುಂದೆ ಬರಬೇಕು. ಅಂಬೇಡ್ಕರ್ ಎನ್ನುವ ಜ್ಯೋತಿಯ ಪ್ರಜ್ವಲನೆ ಮಸುಕಾಗದಂತೆ ಅವರ ಮಾರ್ಗದರ್ಶನದಲ್ಲಿ ಸಮಾಜದ ಸಂಘಟನೆ ಮಾಡಬೇಕು. ನಮ್ಮವರ ಏಳಿಗೆಗೆ ಕಂಕಣಬದ್ಧರಾಗಬೇಕು’ ಎಂದು ಮಹಿಳಾ ಘಟಕದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಪದ್ಮಾವತಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ. ಜಿಲ್ಲಾಧ್ಯಕ್ಷ ಕೂತಂಡಹಳ್ಳಿ ರಾಮಾಂಜಿನಪ್ಪ ಮಾತನಾಡಿ, ಎಸ್ಸಿಎಸ್ಟಿ ರಾಜ್ಯ ಸರ್ಕಾರಿ ನೌಕರರ ಬಲಿಷ್ಠ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಚಿಂತಾಮಣಿ ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ಮುಖಂಡರುಗಳಾದ ಆರ್.ಶ್ರೀನಿವಾಸನ್,ಜಿ.ಶ್ರೀನಿವಾಸ್, ಕಡಗಟ್ಟೂರು ಚಂದ್ರಪ್ಪ, ಗೌರವಾಧ್ಯಕ್ಷರಾದ ಬಾಲಾಜಿ, ಕಾರ್ಯದರ್ಶಿ ಡಾ. ಎನ್ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
.