ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಿ-ತಪ್ಪಿತಸ್ಥರಿಗೆ ನಿಷ್ಠೂರವಾದಿಗಳಾಗಿ ವೃತ್ತಿಘನತೆಗೆ ಕುತ್ತು ಬಾರದಂತೆ ನಡೆದುಕೊಳ್ಳಿ-ಕೊತ್ತೂರು ಮಂಜುನಾಥ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಿಕಾ ಮಾಧ್ಯಮಗಳಿಗೆ ಸಮಾಜದಲ್ಲಿ ಗೌರವವಿದೆ, ತಪ್ಪು ಮಾಡುವವರಿಗೆ ನಿಮ್ಮನ್ನು ಕಂಡರೆ ಭಯವಿರಬೇಕು, ನಿಮ್ಮಲ್ಲೂ ವೃತ್ತಿಯ ಘನತೆಗೆ ಕುತ್ತು ಬಾರದಂತೆ ನಡೆದುಕೊಳ್ಳುವ ಬದ್ದತೆಯೂ ಇರಬೇಕು ಎಂದು ಸಮಾಜ ಸೇವಕ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಅವರೇ 26 ಲಕ್ಷ ರೂ ಕೊಡುಗೆ ನೀಡಿ ನವೀಕರಿಸಿದ ಹವಾನಿಯಂತ್ರಿತ ಮಿನಿಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಅಭಿವೃದ್ದಿ ವಿಚಾರಗಳಲ್ಲಿ ಎಲ್ಲರೂ ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೆ ಸರಿಸಿ ಸಂಘಟಿತರಾಗಬೇಕು.ಯಾವೂದೇ ಒತ್ತಡಗಳಿಗೆ ಮಣಿಯದೆ ಕೆಲಸ ನಿರ್ವಹಿಸಬೇಕು. ನಿಷ್ಟೂರವಾದಿಗಳಾದರೂ ಚಿಂತೆಯಿಲ್ಲ ಯಾರನ್ನು ಮೆಚ್ಚಿಸಲು ಬರೆಯಬೇಡಿ, ಸತ್ಯವನ್ನು ಬರೆಯಿರಿ ಎಂದು ಕಿವಿ ಮಾತು ತಿಳಿಸಿದರು.
ಸಮಾಜದ ಸಂಕಷ್ಟಗಳು ಹಾಗೂ ಸರ್ಕಾರದ ಲೋಪದೋಷಗಳಿದ್ದರೆ ಕಣ್ಣು ತೆರೆಸುವ ಕೆಲಸವನ್ನು ಮಾಡುವ ಪತ್ರಿಕಾ ರಂಗ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಾ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂದ ತಗಡೂರು ಮಾತನಾಡಿ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕ್ರಿಯಾಶೀಲತೆ ಅವರ ವ್ಯಕ್ತಿತ್ವಕ್ಕೆ ನಮ್ಮ ಪತ್ರಕರ್ತರ ಸಂಘವೇ ಕನ್ನಡಿಯಾಗಿದೆ.ಮಂಜುನಾಥ್ ಅವರ ಉದಾರ ಗುಣ ಶ್ಲಾಘನೀಯ ಎಂದರು.
ಭಾರತಕ್ಕೆ ಮಾದರಿಯಾದ ಕರ್ನಾಟಕದ ವಿಧಾನಸೌಧ ಕಟ್ಟಡ ನಿರ್ಮಾಣ ಕಾಲದಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಸ್ತ್ರಿಯಂತೆ ನಿಂತು ಕೆಲಸ ಮಾಡಿಸಿದರೂ ಟೀಕಗಳು ತಪ್ಪಲಿಲ್ಲ, ಅದೇ ರೀತಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಅವರು ಪ್ರಾಮಣಿಕವಾಗಿ ಕಾರ್ಯನಿರ್ವಹಿಸಿದ್ದರೂ ಟೀಕೆ ಅಪಸ್ವರಗಳು ಬರುವುದು ಸಹಜ ಅದನ್ನು ಪರಿಗಣಿಸಬಾರದು ಎಂದರು.
ಪತ್ರಿಕಾ ವೃತ್ತಿಯಲ್ಲಿ ನಿಷ್ಠೂರತೆ ಎಂದಿಗೂ ಕಳೆದು ಕೊಳ್ಳಬಾರದು ಇದರಿಂದ ನಮ್ಮ ಕ್ರಿಯಶೀಲತೆಯನ್ನು ಕಳೆದು ಕೊಂಡಂತೆ ಆಗುವುದು. ಪತ್ರಕರ್ತರ ಸಮಾಜಮುಖಿಯಾಗಿರಬೇಕು, ಸಮಾಜದ ರೋಗಕ್ಕೆ ವೈದ್ಯರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಿಕೆಗಳಿಗೆ 56 ಕೋಟಿ ಜಾಹಿರಾತು ಬಾಕಿ ಹಣ ಬಿಡುಗಡೆ ಮಾಡಿಸಿದ್ದೇವೆ, ಕೋವಿಡ್‍ನಿಂದ ಸಾವನ್ನಪ್ಪಿದ್ದ ಪತ್ರಕರ್ತರ 23 ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಿಸಲಾಗಿದೆ, ಎಲ್ಲಾ ಪತ್ರಕರ್ತರಿಗೂ ಆಯುಷ್ಮಾನ್ ಆರೋಗ್ಯ ಕಾಡ್ ನೀಡಲು ಸರ್ಕಾರ ಒಪ್ಪುವಂತೆ ಮಾಡಿದ್ದೇವೆ ಎಂದರು.

ರಾಜ್ಯ ಪ್ರಧಾನಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯದಲ್ಲಿಯೇ ಅತ್ಯಂತವಾದ ಸುಂದರವಾದ ಮಿನಿಸಭಾಂಗಣವನ್ನು ನಿರ್ಮಿಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ತಿಳಿಸಿ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಫೆ.2ರಂದು ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರ ಸಭೆಗೆ ಹೆಚ್ಚಿನ ಪತ್ರಕರ್ತರು ಆಗಮಿಸಲು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಪತ್ರಕರ್ತರ ಸಂಘಕ್ಕೆ ಆಡಳಿತರೂಢ ಜನಪ್ರತಿನಿಧಿಗಳು ತಮ್ಮ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವುದು ಸಹಜ. ಅದರೆ ಯಾವೂದೇ ಅಧಿಕಾರವಿಲ್ಲದಿದ್ದರೂ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ನಿಸ್ವಾರ್ಥತೆಯಿಂದ 26 ಲಕ್ಷ ರೂ ದೇಣಿಗೆ ನೀಡಿರುವುದು ಸಾಮಾನ್ಯ ವಿಷಯವಲ್ಲ ಎಂದರು.
ಪತ್ರಕರ್ತರ ಸಂಘವನ್ನು ರಾಜ್ಯದಲ್ಲಿ ಪ್ರಥಮವಾಗಿ ಸ್ಥಾಪಿಸಿದವರು ನಮ್ಮ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ
ಡಿ.ವಿ.ಜಿಯವರು.. ಜಿಲ್ಲಾ ಸಂಘದ ಕಟ್ಟಡದ ಅಧುನೀಕರಣಕ್ಕೆ ನೆರವು ನೀಡಿದವರು ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಗಿರುವುದು ಸಂತಸದ ವಿಷಯ ಎಂದರು.
ನಿಷ್ಟೂರವಾದಿಗಳಾಗಿ
ಭಿಕ್ಷುಕರಾಗದಿರಿ
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಕ್ಕೆ ಮಾದರಿಯಾಗಿದೆ. ಪ್ರಥಮವಾಗಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅನಾರೋಗ್ಯ ಪೀಡಿತರಿಗೆ ನೆರವು ನೀಡಿಕೆಯಲ್ಲೂ ನಂಬರ್ 1 ಸ್ಥಾನದಲ್ಲಿದೆ. ಅದೇ ರೀತಿ ಮಿನಿಸಭಾಂಗಣ ಅಧುನೀಕರಣ ಗೊಳಿಸಿ ರಾಜ್ಯದಲ್ಲಿ ಸುಸಜ್ಜಿತ ಪತ್ರಿಕಾ ಭವನ ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.
ಪತ್ರಕರ್ತರು ಸಮಾಜದಲ್ಲಿ ಗೌರವ ಉಳಿಸಿಕೊಳ್ಳಬೇಕು, ವೃತ್ತಿಯಲ್ಲಿ ಗುಣಮಟ್ಟ ಇರಲಿ, ನಾವು ಭಿಕ್ಷುಕರಾಗುವುದು ಬೇಡ, ಡಿ.ವಿ.ಜಿ. ಕಟ್ಟಿದ ಸಂಘದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿ ಕೊಳ್ಳುವ ದೃಢ ನಿರ್ಧಾರದಿಂದಾಗಿ ಜೊಳ್ಳುಗಳು ಸಂಘದಿಂದ ಹೊರಹೋದರೂ ಚಿಂತೆಯಿಲ್ಲ ನಮಗೆ ಮಾನ,ಮಾರ್ಯದೆ ಮುಖ್ಯವಾಗಿದೆ. ಪದಾಧಿಕಾರಿ ಸ್ಥಾನದ ಆಸೆಗಾಗಿ ಕಣ್ಣಿಗೆ, ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವುದು ಸಮಾಂಜಸವಲ್ಲ ಎಂದು ಕಿಡಿ ಕಾರಿದರು.


ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು ಮಾತನಾಡಿ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರಿಂದ ನಾವು 5 ಲಕ್ಷ ನೆರವು ಅಪೇಕ್ಷಿಸಿದ್ದೇವು ಅದರೆ ನವೀಕರಣ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ 11 ಲಕ್ಷದ ನೆರವು ಘೋಷಿಸಿದರು. ಅದರೆ ನವೀಕರಣದ ಕ್ರಿಯಾಯೋಜನೆ 26 ಲಕ್ಷ ತಲುಪಿರುವುದನ್ನು ಸಂಪೂರ್ಣವಾಗಿ ಭರಿಸಿರುವುದಕ್ಕೆ ಜಿಲ್ಲಾ ಪತ್ರಕರ್ತರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೊರೋನಾ ಸಂಕಷ್ಟದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ದಿನಸಿ ಕಿಟ್‍ಗಳನ್ನು ವಿತರಿಸಿದ್ದನ್ನು ನೆನಪಿಸಿದರು. ಇದರ ಜೂತೆಗೆ ಪತ್ರಕರ್ತರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕೊತ್ತೂರು ಮಂಜುನಾಥ್ ಹೃದಯವಂತಿಕೆ ಮೆಚ್ಚುವಂತದ್ದು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಹಾಗೂ ನವೀಕೃತ ಭವನದ ಕಾಮಗಾರಿ ನಡೆಸಿಕೊಟ್ಟ ಚಂಚಿಮಲೆ ರಮೇಶ್, ಈ ನವೀಕರಣದ ಕೆಲಸವನ್ನು ಗುತ್ತಿಗೆ ಪಡೆದೆ. ಆದರೆ ಈ ವಿಚಾರದಲ್ಲಿ ಅಧ್ಯಕ್ಷರಾದ ಮುನಿರಾಜು ಅವರು ಅವರ ಸ್ವಂತ ಮನೆ ನಿರ್ಮಿಸುವಾಗಿನ ಬದ್ದತೆಯಂತೆ ನಿಂತು ಕೆಲಸ ಮಾಡಿಸಿದರು.
ಕಾಮಗಾರಿಯ ಗುಣಮಟ್ಟ ಮತ್ತು ಹಣಕಾಸಿನಲ್ಲಿ ನಯಾಪೈಸೆ ಲೋಪವಾಗಿಲ್ಲ ಎಂದು ಸ್ವಷ್ಟಪಡಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಂಘಕ್ಕೆ ಅವಶ್ಯವಿರುವ ಗ್ರಂಥಾಲಯವನ್ನು ನಗರಸಭೆ ಸಾಮಾನ್ಯಸಭೆಯಲ್ಲಿಟ್ಟು ಅನುಮತಿಪಡೆದು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಾಗೂ ಕಾರ್ಯದರ್ಶಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ಮಹಮದ್ ಯುನೂಸ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್,ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ,ಹಿರಿಯ ಪತ್ರಕರ್ತರಾದ ಎಂ.ಜಿ.ಪ್ರಭಾಕರ್,ಸಿ.ಎಂ.ಮುನಿಯಪ್ಪ,ವಾಸುದೇವಹೊಳ್ಳ, ಅನಂತರಾಮ್, ಪಲ್ಲವಿ ಮಣಿ, ಮತ್ತಿತರರಿದ್ದರು
.