

ಶ್ರೀನಿವಾಸಪುರ : ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದಲ್ಲಿರುವ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಇಂದು ಅಕ್ತಾರ್ ಟ್ರೇಡರ್ಸ್ ಮಾಲೀಕರು ಮತ್ತು ಸಮಾಜ ಸೇವಕ ನದೀಮ್ ಅಕ್ತರ್ , ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರೊಂದಿಗೆ ಶಾಲೆಗೆ ಭೇಟಿ ನೀಡಿದರು.
ಶಾಲೆಯ ಮಕ್ಕಳಿಗೆ ಚಾಕಲೇಟ್ ಗಳು ನೀಡಿ ಖುಷಿಪಟ್ಟರು ಮತ್ತು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಳ್ಳಲು ನಾಲ್ಕು ಕಂಪ್ಯೂಟರ್ ಗಳನ್ನು ನೀಡುವ ಭರವಸೆ ನೀಡಿದರು. ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಆದ್ದರಿಂದ ಶಿಕ್ಷಕರು ತಮ್ಮ ಜ್ಞಾನ ಮತ್ತು ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಎಂದು ತಿಳಿಸಿದರು.
ಸಮಾಜದ ದಾನಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಅಜ್ಮೀರ್ ದರ್ಗಾದ ಸೂಫಿ ಸಲ್ಮಾನ್ ಚಿಸ್ತಿ ಅವರು ಮಾತನಾಡುತ್ತಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉರ್ದು, ಕನ್ನಡ, ಇಂಗ್ಲೀಷ್ ಮತ್ತು ಇತರರ ವಿಷಯದ ಬಗ್ಗೆ ಬೋಧನೆ ಜೊತೆ ದೀನಿಯಾತ್ ಸಹ ಅರ್ಧ ಗಂಟೆ ಪಾಠ ನೀಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮತ್ತು ವಿದ್ಯಾಭ್ಯಾಸದ ಕಡೆ ಗಮನ ಹರಿಸ ನಿಮ್ಮ ಭವಿಷ್ಯವನ್ನು ಉಜ್ಜಲುಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಸಾಧಿಕ್ ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾಖಾನ್ , ಇಂತಿಯಾಸ್ , ಮೌಲ , ಶೋಹೇಬ್ , ಸಲ್ಮಾನ್ ಮತ್ತು ಶಿಕ್ಷಕರು ಇದ್ದರು.
