

ದಿನಾಂಕ 05.01.2023 ರಂದು ಹೊಸಂಗಡಿಯ ರಸ್ತೆಯಲ್ಲಿ ನಿರ್ಗತಿಕನಾಗಿ,ಕಳಪೆಯಾದ ಸ್ವಚ್ಛತೆ ಮತ್ತು ಖಿನ್ನತೆಗೆ ಒಳಗಾಗಿ
ಅಲೆದಾಡುತ್ತಿದ್ದ ಸುಮಾರು 39 ವರ್ಷ ಪ್ರಾಯದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಇಬ್ರಾಹಿಂ ಅವರು ರಕ್ಷಿಸಿ ಮಂಜೇಶ್ವರದ
ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಆರೈಕೆ ಮತ್ತು ಚಿಕಿತ್ಸೆಗಾಗಿ ದಾಖಲಿಸಿದರು.
ಪ್ರಾಥಮಿಕ ಆರೈಕೆಯ ನಂತರ ಅವರಿಗೆ ಮನೋವೈದ್ಯಕೀಯ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಅವರು ತನ್ನನ್ನು
ಅಹ್ಮದ್ ಬಾಷಾ ಎಂಬುದಾಗಿ ತಿಳಿಸಿದರು . ಮನೋರೋಗ ತಜ್ಞರು ಮತ್ತು ಮನೋವೈದ್ಯಕೀಯ ಸಮಾಜ ಸೇವಕರ
ಮಾರ್ಗದರ್ಶನದಲ್ಲಿ ಅವರಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು.
ನಿಧಾನವಾಗಿ ಅವರು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಂಡರು ಮತ್ತು ಅವರ ಸ್ಥಳೀಯ ವಿವರಗಳನ್ನು ಹಂಚಿಕೊಂಡರು. ಈ
ವಿವರಗಳ ಆಧಾರದ ಮೇಲೆ ಸ್ನೇಹಾಲಯ ತಂಡ ಸ್ಥಳೀಯ ಪೊಲೀಸ್ ಠಾಣೆ ಮತ್ತು ಪಂಚಾಯತ್ ನ್ನು ಸಂಪರ್ಕಿಸಿತು . ಇದರಂತೆ
ಕರ್ನಾಟಕದ ಬೀದರ್‌ನ ಅಮಲಾಪುರದ ಟಿಪ್ಪು ಸುಲ್ತಾನ್ ಕಾಲೋನಿಯಲ್ಲಿನ ಅವರ ಕುಟುಂಬವನ್ನು ಪತ್ತೆಹಚ್ಚುವಲ್ಲಿ ತಂಡ
ಯಶಸ್ವಿಯಾಯಿತು .ಸ್ನೇಹಾಲಯ ತಂಡವು ಅವರ ಕಿರಿಯ ಸಹೋದರ ಮೊಹಮ್ಮದ್ ಮುಕ್ತಾರ್ ಅವರನ್ನು ಸಂಪರ್ಕಿಸಿತು. ಇಂದು
ದಿನಾಂಕ 24.04.2023 ರಂದು ಅವರು ಮತ್ತು ದಲಿತ ಮತ್ತು ಮೈನಾರಿಟಿಸ್ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ
ಮಹಮ್ಮದ್ ಸಲೀಂ ತಮ್ಮ ನಾಯಕರಾದ ಶ್ರೀ ಮೊಹಮ್ಮದ್ ಸಲೀಮ್ ಅವರೊಂದಿಗೆ ಸ್ನೇಹಾಲಯವನ್ನು ತಲುಪಿದರು. ಸುಮಾರು
8 ತಿಂಗಳ ಹಿಂದೆ ಕಾಣೆಯಾದ ಅಹ್ಮದ್ ಪಾಷಾ ಅವರನ್ನು ಮತ್ತೆ ಭೇಟಿ ಮಾಡಿ ಸಂತೋಷಪಟ್ಟರು.
ಅಹ್ಮದ್ ಪಾಷಾ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಮ್ಮೆ ಅಪಘಾತಕ್ಕೀಡಾದರು ಮತ್ತು ತಲೆಗೆ ಆದ ಏಟಿಗೆ ಚಿಕಿತ್ಸೆ
ಪಡೆದರು ಎಂದು ಅವರು ತಿಳಿಸಿದರು . ತದನಂತರ ಅವರು ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು ಚಿಕಿತ್ಸೆ ಪಡೆಯುತ್ತಿದ್ದು
ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದಾಗಿ ಹಾಗೂ ಅವರೆಲ್ಲರು ಆತನಿಗಾಗಿ ಹುಡುಕಾಟ ನಡೆಸಿದ್ದಾಗಿ ತಿಳಿಸಿದರು .ಅಹ್ಮದ್
ಪಾಷಾರನ್ನು ಮತ್ತೆ ಭೇಟಿ ಮಾಡಿ ತಮ್ಮ ಊರಿಗೆ ಕರೆದೊಯ್ಯಲು ಸಂತೋಷಪಟ್ಟರು. ಅವರು ಸ್ನೇಹಾಲಯದ ಸೇವೆಯನ್ನು
ಶ್ಲಾಘಿಸಿದರು ಮತ್ತು ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.


