ಮಂಗಳೂರು: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು MCC ಬ್ಯಾಂಕ್ ಲಿಮಿಟೆಡ್ ಸಹಯೋಗದಿಂದ ಡಿಸೆಂಬರ್ 4,2022 ರಂದು ದ.ಕ.ಜಿಲ್ಲಾ PLHIV ಯವರಿಗೆ ಸ್ನೇಹಮಿಲನ – 2022 ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಯಿತು.ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250 PLHIV ಯವರು ಭಾಗವಹಿಸಿದ್ದು ಸ್ನೇಹಮಿಲನ – 2022 ಅತ್ಯಂತ ಯಶಸ್ವಿಯಾಗಿ ನಡೆಯಿತು. ಜೋಸ್ಅಲ್ಲುಕಾಸ್ ಸಂಸ್ಥೆಯ ಶ್ರೀ ರಾಕೇಶ್ ರವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.ವಿಶ್ವವು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತದೆ. ಎಚ್ಐವಿ ಸೋಂಕಿತರನ್ನು ಬೆಂಬಲಿಸಲು ಮತ್ತು ಏಡ್ಸ್ನಿಂದ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಸೇರುತ್ತಾರೆ. ವಿಶ್ವ ಏಡ್ಸ್ ದಿನದ 2022 ರ ವಿಷಯದಂತೆ ಜನಸಾಮಾನ್ಯರೊಂದಿಗೆ ಸಮಗೊಳಿಸುವ ಕರೆಯಂತೆ ಉತ್ತಮ ಬದುಕಿನತ್ತ ಹೆಜ್ಜೆ ಹಾಕುವಂತೆ ಈ ಕಾರ್ಯಕ್ರಮ ವು ಸಂದೇಶ ನೀಡಿತು. Ms.ಕ್ಯಾರಲ್ ಅವರ ನೇತೃತ್ವದಲ್ಲಿ ಸಂತ ಅಲೋಶಿಯಸ್ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರಾದ ಶ್ರೀಮತಿ ರೆಹಾನಾ ಅವರ ನೇತೃತ್ವದಲ್ಲಿ HPR ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು PLHIV ಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನೋರಂಜನಾ ಆಟಗಳನ್ನು ನಡೆಸಲಾಯಿತು. ಅಪರಾಹ್ನ ಭೋಜನದ ನಂತರ ಫಾ.ಪೌಲ್ ಸೆಬಾಸ್ಟಿಯನ್ ಡಿ ಸೋಜಾ ಅವರಿಂದ ಅದ್ಭುತ ಜಾದೂಪ್ರದರ್ಶನ ನಡೆಯಿತು. ಮಂಗಳೂರಿನ ಶ್ರೀ ಜಾಸ್ಲೋನ್ ರವರು ದೇಹಧಾರ್ಡ್ಯಾ ಪ್ರದರ್ಶನವನ್ನು ನೀಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ180 ಕುಟುಂಬಗಳಿಗೆ ದವಸಧಾನ್ಯಗಳನ್ನೊಳಗೊಂಡ ಆಹಾರದ ಕಿಟ್ ವಿತರಿಸಲಾಯಿತು. ಇಂತಹ ಸುಂದರ ಹಾಗೂ ಅಪರೂಪದ ಮತ್ತು ಮನಮುಟ್ಟುವಂತಹ ಕಾರ್ಯಕ್ರಮ ವನ್ನು ಆಯೋಜಿಸಿದ MCC ಬ್ಯಾಂಕ್ ಲಿಮಿಟೆಡ್ ಮತ್ತು ಸ್ನೇಹಾಲಯ ಚಾರಿಟೇಬಲ್ಟ್ರ ಟ್ರಸ್ಟಗೆ ಹೊಂಗಿರಣ ಸಂಘಟನೆಯು ಕೃತಜ್ಞತೆ ಸಲ್ಲಿಸಿತು. ಉಭಯ ಸಂಸ್ಥೆಗಳು ಹೊಂಗಿರಣದ ಯೋಜನಾ ಸಂಯೋಜಕರಾದ ಶ್ರೀಮತಿ ಸೀಮಾರವರನ್ನು ಸನ್ಮಾನಿಸಿತು.ಶ್ರೀಮತಿ ವಸಂತಿ ಮತ್ತು ಶ್ರೀಮತಿ ರೆನಿಟ್ಟಾರವರು ಇಂದಿನ ಈ ವಿಶೇಷ ಸಂತೋಷದಾಯಕ್ಕಾ ರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
MCC ಬ್ಯಾಂಕ್ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು, ಜನರಲ್ ಮ್ಯಾನೇಜರ್ ಆದ ಶ್ರೀ ಸುನಿಲ್ಮಿ ನೇಜಸ್,ನಿರ್ದೇಶಕರು,ಲಯನ್ಸ್ ನ ದ.ಕ.ಜಿಲ್ಲಾ MCC ಯಾದ ಶ್ರೀ ವಸಂತ್ ಶೆಟ್ಟಿ ,ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ, ಟ್ರಸ್ಟಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ಸಿಗೆಸಹಕರಿಸಿದರು.ಶ್ರೀ ರಫಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.