Manjeswaram: In an observance suffused with profound meaning, Snehalaya Charitable Trust commemorated its 14th anniversary, an occasion that signifies over a decade of dedicated service imbued with compassion and its consequential effects. The institution, founded upon the principles of empathy and altruism, has emerged as a beacon of hope, catering to the underprivileged and effecting significant transformations in myriad lives over the course of its existence.
The ceremonial events commenced amid a gathering of eminence at the recently erected Grotto of St. Devasahayam Pillai. This sacred sanctuary was graced by the benedictions and formal consecration offered by the venerable Rev. Fr. Basil Vas, who holds the esteemed role of Parish Priest at the Sacred Hearts Church in Vorkady. Additionally, the occasion garnered the presence of significant personalities, notably among them being Rev. Fr. Archibald Gonsalves OCD, distinguished luminary serving as the Assistant Provincial of the Karnataka & Goa Province. Among those lending further significance to the event were the revered Founder Br Joseph Crasta and the other esteemed trustees of Snehalaya.
Subsequent to the blessing, a Solemn Thanksgiving Mass proceeded, presided over by Rev Fr Archibald OCD and co-officiated by Rev Fr. Edwin Pinto, the Parish Priest of Manjeshwar Church, Fr Basi Vas, the Parish Priest of Vorkady Church, and Fr Cyril D’ Souza, the Chaplain of Snehalaya.
Following the culmination of the Mass, Br Joseph Crasta, the Founder of Snehalaya, delivered a touching expression of gratitude. This he conveyed through the presentation of tokens of appreciation in the form of mementos and bouquets to the officiating clergy. Furthermore, he extended his heartfelt appreciation to the distinguished assembly, the esteemed benefactors, and the cherished well-wishers. Notably, he also acknowledged the outstanding efforts of Mr. Marko Stanly Fernandes, who had earned the distinction of being recognized as the Best Staff of the Year.
In a climactic culmination of the event, a lavish meal was extended to all attendees, thereby marking the pinnacle of the festivities. The recipients, partaking in this sumptuous feast, conveyed their heartfelt gratitude to Br Joseph Crasta, thereby underscoring the intensity of the occasion.
14 ವರ್ಷಗಳ ಫಲದಾಯಕ ಸೇವೆಯನ್ನು ಸಂಭ್ರಮಿಸಿದ ಸ್ನೇಹಾಲಯ
2009 ರಲ್ಲಿ ಸಂತ ಮದರ್ ತೆರೇಸಾರವರ ಜನ್ಮದಿನದಂದು ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆ ಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ, ಕಳೆದ 14 ವರ್ಷಗಳಲ್ಲಿ ಅಸಂಖ್ಯಾತ ನೊಂದವರ ಜೀವನವನ್ನು ಬೆಳಗಿಸಿದೆ.
ಈ ಸಂಧರ್ಬದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ ದೇವಾಲಯದ ಪ್ರಧಾನ ಗುರುಗಳಾದ ವಂದನೀಯ ಫಾ. ಬಾಸಿಲ್ ವಾಸ್ ರವರು ತಮ್ಮ ಪುಣ್ಯ ಕರಗಳಿಂದ ಆಶೀರ್ವದಿಸಿ ಉದ್ಗಾಟಿಸಿದರು. ಈ ಸಂಧರ್ಬದಲ್ಲಿ ಸಮುದಾಯದ ಪ್ರಮುಖ ಮುಖಂಡರು, ಧರ್ಮಗುರುಗಳು, ಸಹೋದರ-ಸಹೋದರಿಯರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ಅನಂತರ, ಕಳೆದ 14 ವರ್ಷಗಳಿಂದ ದೇವರು ಸುರಿಸಿದ ಕ್ರಪೆ ಮತ್ತು ಅನುಗ್ರಹಗಳಿಗಾಗಿ ಧನ್ಯವಾದಗಳನು ಅರ್ಪಿಸುತ್ತಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂದನೀಯ ಗುರುಗಳಾದ ಫಾ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಫಾ ಬಾಸಿಲ್ ವಾಸ್, ಫಾ ಎಡ್ವಿನ್ ಪಿಂಟೊ ಮತ್ತು ಫಾ ಸಿರಿಲ್ ಡಿ ಸೋಜಾ ರವರು ಸಹ ಅರ್ಚಕರಾಗಿ ಬಲಿಪೂಜೆಯಲ್ಲಿ ಭಾಗವಹಿಸಿದರು
ಪವಿತ್ರ ಬಲಿ ಪೂಜೆಯ ನಂತರ, ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆಯ ಸ್ಪರ್ಶವನ್ನು ವ್ಯಕ್ತಪಡಿಸಿದರು. ಈ ಸಂಸ್ಥೆಯ 14 ವರ್ಷಗಳ ಪಯಣವನ್ನು ಸುಗಮ ರೀತಿಯಲ್ಲಿ ಸಂಚಾಲನೆ ಮಾಡಿದ ಕಾರಣಕರ್ತ ದೇವರನ್ನು ಹಾಗೂ ಎಲ್ಲಾ ಹಿತೈಷಿ ಮಿತ್ರರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಅನಂತರ ಗೌರವಾನ್ವಿತ ಗುರುಗಳಿಗೆ ಸ್ಮರಣಿಕೆಗಳು ಮತ್ತು ಹೂಗುಚ್ಛಗಳನ್ನು ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಶೋಭೆಯಾಗಿ ಅವರು ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಶ್ರೀ. ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್ ಅವರ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಕೊನೆಗೆ ಈ ಕಾರ್ಯಕ್ರಮವು ಒಂದು ಸಹಭೋಜನದೊಂದಿಗೆ ಮುಕ್ತಾಯವಾಯಿತು.