ಬ್ರಹ್ಮಾವರ; ಮಹಿಳಾ ವೇದಿಕೆ ಎಸ್ ಎಂ ಎಸ್ ಪದವಿಪೂರ್ವ ಕಾಲೇಜು ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ- ಬಾರ್ಕೂರು ಇದರ ಸಹಯೋಗದೊಂದಿಗೆ ದಿನಾಂಕ 13.9.2024 ದಂದು ‘ಆರೋಗ್ಯ ನೈರ್ಮಲ್ಯ ಮತ್ತು ಪೋಷಣೆ’ ಎಂಬ ವಿಷಯಾಧಾರಿತ ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನ ಕಲಾಭವನದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ್ತ್ರೀರೋಗ ತಜ್ಞರಾದ ಡಾ. ರಾಜಲಕ್ಷ್ಮಿ, ವಾತ್ಸಲ್ಯ ಕ್ಲಿನಿಕ್, ಸಂತೆಕಟ್ಟೆ ರವರು ಸಮತೋಲನ ಆಹಾರ ಆರೋಗ್ಯಕರ ಆಹಾರಾಭ್ಯಾಸಗಳು ಮತ್ತು ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು. ಸುಮಾರು 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿನಿಯರ ಈ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಆಯೇಶಾ ಜುಲ್ಫಾರವರು ಸ್ವಾಗತಿಸಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕುಮಾರಿ ಕುಸುಮಾ ಸಿ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಕಲಾ ವಿಭಾಗದ ಕುಮಾರಿ ಲಕ್ಷಿತಾ ರವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಐವನ್ ಡೊನಾತ್ ಸುವಾರಿಸ್, Ln. ಎಸ್. ಜಯರಾಮ ನಾಯ್ಕ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಬ್ರಹ್ಮಾವರ- ಬಾರ್ಕೂರ್, Ln. ಪ್ರಭಾಕರ್ ಶೆಟ್ಟಿ, ಶ್ರೀಮತಿ ವತ್ಸಲಾ ಶೆಟ್ಟಿ, ಮುಖ್ಯಸ್ಥರು, ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ), ಶ್ರೀಮತಿ ಜೂಲಿಯೆಟ್ ಜೆಸಿಂತಾ ಲುವಿಸ್, ಹಿರಿಯ ಶಿಕ್ಷಕರು, ಎಸ್.ಎಂ.ಎಸ್. ಕನ್ನಡ ಮಾಧ್ಯಮ ಶಾಲೆ, ಶ್ರೀಮತಿ ಪ್ರೀಮಾ ಕರ್ನೆಲಿಯೋ, ಸಂಯೋಜಕರು, ಮಹಿಳಾ ವೇದಿಕೆ, ಎಸ್ ಎಂ ಎಸ್ ಪದವಿಪೂರ್ವ ಕಾಲೇಜು ಉಪಸ್ಥಿತರಿದ್ದರು.