

ಕುಂದಾಪುರ, ನ.19: ನವೆಂಬರ್ 10 ರಂದು ನಡೆದ ಕುಂದಾಪುರ ವಲಯ ಮಟ್ಟದ ಸ್ಥಳದಲ್ಲೆ ಪಾಕೋಪಕರಣ ತಯಾರಿಕೆ ವಿಭಾಗದಲ್ಲಿ ಸಂತ ಮೇರಿಸ್ ಪ್ರೌಢ ಶಾಲೆಯ ಶಿಕ್ಷಕಿ ಸ್ಮಿತಾ ಇವರಿಗೆ ದ್ವೀತಿಯ ಬಹುಮಾನ ಲಭಿಸಿದೆ. ಈ ಬಹುಮಾನವನ್ನು ಕುಂದಾಪುರ ಬ್ಲಾಕ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ ಮತ್ತು ಇತರರು ಉಪಸ್ಥಿತರಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರಿ ಅ|ವಂ|ಸ್ಟ್ಯಾನಿ ತಾವ್ರೊ ಅವರು ಅಭಿನಂದಿಸಿದ್ದಾರೆ.
