

ಶ್ರೀನಿವಾಸಪುರ: ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರೇಂಕ್ ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ 596 (99.33) ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರೆನಿಸಿದ್ದಾರೆ.
ಫಲಿತಾಂಶ ಬರುತ್ತಿದ್ದಂತೆ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಥಮ ರೇಂಕ್ ಗಳಿಸಿದ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ಅವರಿಗೆ ತಂದೆ ಎಸ್.ಸಿ.ಮುರಳಿನಾಥ್ ಕೇಕ್ ತಿನ್ನಿಸಿ ಸಂತೋಷ ಹಂಚಿಕೊಂಡರು.
‘ನನ್ನ ಈ ಸಾಧನೆಗೆ ಉಪನ್ಯಾಸಕರು ಹಾಗೂ ಪೋಷಕರ ಪ್ರೋತ್ಸಾಹ ಕಾರಣ. ನಾನು ಆದಿನದ ಪಾಠಗಳನ್ನು ಆ ದಿನವೇ ಓದಿ ಮುಗಿಸುತ್ತಿದ್ದೆ. ಮುಂದೆ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಏರೋನಾಟಿಕ್ ಎಂಜಿನಿಯರಿಂಗ್ ಓದಲುು ಬಯಸಿದ್ದೇನೆ’ ಎಂದು ಎಂದು ಹೇಳಿದರು.
