Sixth Day Novena at Stella Maris Church, Kalmady/ಕಲ್ಮಾಡಿ ಚರ್ಚಿನಲ್ಲಿ ಆರನೇ ದಿನದ ನೊವೆನಾ ಪ್ರಾರ್ಥನೆ

Sixth Day Novena at Stella Maris Church, Kalmady

The Sixthday Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 11th, Wednesday. Rev. Fr Anthony Shera, Secretary of C.B.E, Mangalore Diocese, conducted the novena prayers for the intentions of the Married Couple.

The Parish Priest of Stella Maris Church, Kalmady Rev. Fr Baptist Menezes, Asst Parish Priest Rev. Fr Roy Lobo, con-celebrated the Mass alongwith Rev. Fr Anthony Shera.The choir was from the HOLY ROSARY CHURCH, Kundapur.

Feast of Our Lady of Vailankanni, proclamation and dedication of Our Lady of Vailanknni as a diocesan Shrine and the Golden Jubilee Celebration of Stella Maris Church, Kalmady will be celebrated on August 15th, 2022.

ಕಲ್ಮಾಡಿ ಚರ್ಚಿನಲ್ಲಿ ಆರನೇ ದಿನದ ನೊವೆನಾ ಪ್ರಾರ್ಥನೆ

ಕಲ್ಮಾಡಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಆರನೇ ದಿನದ ನೊವೆನಾ ಪ್ರಾರ್ಥನೆಯನ್ನು ಕಥೋಲಿಕ್‌ ಬೋರ್ಡ್‌ ಆಫ್‌ ಎಜುಕೇಶನ್‌ನ ಕಾರ್ಯದರ್ಶಿ ವಂ|ಆಂಟನಿ ಶೆರಾ ಅವರು ದಂಪತಿಗಳಿಗಾಗಿ ನಡೆಸಿದರು. ಅವರು ತಮ್ಮ ಸಂದೇಶದಲ್ಲಿ ನಮ್ಮ ಕುಟುಂಬದ ದೃಷ್ಠಿಯು ಯೋಸೆಫ್‌, ಮರಿಯಮ್ಮ ಮತ್ತು ಯೇಸುವಿನಲ್ಲಿದ್ದು ನಮ್ಮ ಕುಟುಂಬಗಳು ಅವರ ಕುಟುಂಬದಂತಾಗಲು ಪ್ರಯತ್ನಿಸಬೇಕು, ನಮ್ಮ ಕುಟುಂಬಗಳಲ್ಲಿ ಪ್ರೀತಿ, ವಿಶ್ವಾಸ ಮತ್ತು ಕ್ಷಮೆ ನೆಲೆಸುವಂತಾಗಲಿಯೆಂದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ|ರೋಯ್ ಲೋಬೊ, ಇವರು ಬಲಿಪೂಜೆಯಲ್ಲಿ ಪಾಲ್ಗೊಂಡರು.ಕುಂದಾಪುರ ಹೋಲಿ ರೋಜರಿ ಚರ್ಚಿನ ಗಾಯನ ಮಂಡಳಿಯು ಬಲಿಪೂಜೆಯ ವೇಳೆ ಗಾಯನಕ್ಕೆ ನೆರವಾದರು.

ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಚರ್ಚಿನ ಸುವರ್ಣ ಮಹೋತ್ಸವನ್ನು ಆಗೋಸ್ಟ್15 ರಂದು ಆಯೋಜಿಸಲಾಗಿದೆ.