ಕರ್ಣಾಟಕ ಗೇರು ಉತ್ಪಾಕರ ಸಂಘದಿಂದ ಆರು ಓಕ್ಸಿಜನ್ ಕೋನ್ಸೆಂಟ್ರೇಟರ್ ನ್ನು ಭಾ. ರೆಡ್ ಕ್ರಾಸ್ ಕುಂದಾಪುರ ಶಾಖೆಗೆ ಕೊಡುಗೆ

JANANUDI.COM NETWORK

ಕುಂದಾಪುರ, ಜೂ.23: ಕರ್ಣಾಟಕ ಗೇರು ಉತ್ಪಾಕರ ಸಂಘದವರು (Karnataka cashew manufacturing association) ಆರು ಓಕ್ಸಿಜನ್ ಕೋನ್ಸೆಂಟ್ರೇಟರ್ ನ್ನು 21 ರಂದು ದೇಣಿಗೆಯಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಗೆ ದೇಣಿಗೆ ನೀಡಿದರು.

ಇದರ ಉದ್ದೇಶ ಅಗತ್ಯ ವಿರುವ ರೋಗಿಗಳಿಗೆ ಉಚಿತವಾಗಿ ನೀಡುವುದಕ್ಕಾಗಿ ಈ ಕೊಡುಗೆಯಾಗಿದೆ

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತಾಯ, ನಾರಾಯಣ ದೇವಾಡಿಗ, ಗೇರು ಬೀಜ ಉತ್ಪಾದನಾ ಸಂಘದ ಉಪಾಧ್ಯಕ್ಷ ರಾದ ಗೋಪಿನಾಥ್ ಕಾಮತ್, ಸದಸ್ಯರು ಗಳಾದ ಕಿರಣ್ ಕೊಡ್ಗಿ, ಶಾನಾಡಿ ಸಂಪತ್ ಶೆಟ್ಟಿ, ಶಶಿಧರ ಶೆಟ್ಟಿ, ಶಂಕರ್ ಹೆಗ್ಡೆ, ನಾಗರಾಜ್ ಶೆಟ್ಟಿ, ವಂಡಾರ್ ಸಂಪತ್ ಶೆಟ್ಟಿ, ಗೋಪಾಲಕೃಷ್ಣ ಕಾಮತ್, ಶಂಕರ್ ಅಂಕದಕಟ್ಟೆ, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಡಾ. ಪುತ್ರನ್ ಇವರ ಧನ್ಯವಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.