

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ| ಎ. ವಿ. ಹೆಬ್ಬಾರ್ ಹಾಗೂ ದಿ| ಅವಿನಾಶ ಹೆಬ್ಬಾರ್ ಸಂಸ್ಮರಣೆಯಲ್ಲಿ ಆ. 25 ರಂದು ಹಿಂದುಸ್ತಾನಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಂದಾಪುರ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಭಾರ್ಗವ ಹೆಗಡೆ ಶಿರಸಿ, ಸಿತಾರ್ ವಾದನದ ಮೂಲಕ ಶೋತೃವರ್ಗದವರನ್ನು ರಂಜಿಸಲಿದ್ದಾರೆ. ವಿಘ್ನೇಶ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಲಿದ್ದಾರೆ.
ಕು. ನಿಹಾರಿಕಾ ದೇರಾಜೆ ಹಿಂದುಸ್ತಾನಿ ಗಾಯನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವರು. ಶಶಿಕಿರಣ್ ಮಣಿಪಾಲ್ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ. ಸಂಗೀತಾಸಕ್ತರು ಪಾಲ್ಗೊಳ್ಳಬೇಕೆಂದು ಆಹ್ವಾನಿಸಲಾಗಿದೆ