

ಕುಂದಾಪುರದ ಪ್ರತಿಷ್ಠಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿ’ಸೋಜಾ ಎ.ಸಿ. ರವರು ಕರ್ನಾಟಕರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ರುಪ್ಸಾ ಇವರಿಂದ ಕೊಡಲ್ಪಡುವ ರಾಜ್ಯ ಮಟ್ಟದ‘ವಿದ್ಯಾರತ್ನ’ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ದಿನಾಂ :21/10/2024ರ ಸೋಮವಾರದಂದು ಬೆಂಗಳೂರಿನ ಜುಬಲಿ ಇಂಟರ್ನ್ಯಾಶಾನಲ್ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಶಿಕ್ಷಣ ಸಚಿವರಿಂದ ಪಡೆದಿರುತ್ತಾರೆ.
ಇವರು ಕಳೆದ 5 ವರ್ಷಗಳಿಂದ ಕುಂದಾಪುರದ ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮುಖ್ಯೋಪಾಧ್ಯಾಯಿನಿಯಾಗಿ ಜವಬ್ದಾರಿ ವಹಿಸಿಕೊಂಡ ನಂತರ ಶಾಲೆಯಲ್ಲಿ ಮಕ್ಕಳ ಸಂಖ್ಯೆಅಧಿಕವಾಯಿತು. ಶಾಲೆಯಲ್ಲಿ ಶಿಸ್ತು ,ಮೌಲ್ಯಯುತ ಶಿಕ್ಷಣ ಮತ್ತುಪಠ್ಯೇತರ ಚಟುವಟಿಕೆಗಳ ಜೊತೆಗೆಕಳೆದ 7ವರ್ಷಗಳಿಂದ ಶಾಲೆ ಸತತವಾಗಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ100 ದಾಖಲೆಯ ಫಲಿತಾಂಶ ಪಡೆಯಲುಇವರ ಸೇವೆ ಹಾಗು ಪರಿಶ್ರಮವೇಕಾರಣ. ಇವರ ಈ ನಿಸ್ವಾರ್ಥ ಸೇವೆ ಹಾಗು ಪರಿಶ್ರಮವನ್ನು ಪರಿಗಣಿಸಿ ರುಪ್ಸಾ2024ರ ‘ವಿದ್ಯಾರತ್ನ’ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಮುಖ್ಯೋಪಾಧ್ಯಾಯಿನಿಯವರಿಗೆ ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲಾ ಸಂಚಾಲಕರು ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ವೃಂದ,ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ


