ಕುಂದಾಪುರ, ಜ.24; ನಗರ ಯೋಜನಾ ಪ್ರಾಧಿಕಾರ ಕುಂದಾಪುರ ಹಾಗೂ ಅಸೋಸಿಯೇಷನ್ ಆಫ್ ಕಂಸಲ್ಟಿಂಗ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಯೋಗದಲ್ಲಿ ನಡೆದ ಏಕ ವಿನ್ಯಾಸ ನಕ್ಷೆ ರಚನೆ ಕಾರ್ಯಕಾರ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ನಡೆಯಿತು.
ತ್ವರಿತ ಗತಿಯ ನಗರೀಕರಣ ಪ್ರಗತಿಯನ್ನು ಹೊಂದುತ್ತಿರುವ ಕುಂದಾಪುರ ಮತ್ತು ಬೈದೂರು ತಾಲೂಕಿಗೆ, ಸರಕಾರದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ , ವಿದ್ಯುತ್ , ನೀರು ಪೂರೈಕೆಗೆ ಏಕ ವಿನ್ಯಾಸ ನಕ್ಷೆಯ ಪರಿಕಲ್ಪನೆ ಸಹಕಾರಿಯಾಗಲಿದೆ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ತಿಳಿಸಿದರು.
ಸಭೆಯಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಇಕ್ಬಾಲ್ ಪಿ ಎಂ , ಸದಸ್ಯ ಕಾರ್ಯದರ್ಶಿ ನವೀನ್ ಜಿಎಸ್, ಸದಸ್ಯರಾದ ಚಂದ್ರ ಅಮೀನ್, ಚಂದ್ರಶೇಖರ್ ಶೆಟ್ಟಿ, ಅಲ್ಫಾಜ್ ಉಪಸ್ಥಿತರಿದ್ದರು.
ಕುಂದಾಪುರ ಮತ್ತು ಬೈಂದೂರು ತಾಲೂಕಿನ 30ಕ್ಕೂ ಹೆಚ್ಚು ಇಂಜಿನಿಯರ್ಸ್ ಎಸೋಸಿಯೇಷೇನಿನ ಸದಸ್ಯರು ಮತ್ತು ಇತರರು ,ಭಾಗಿಯಾಗಿ ಪ್ರಸ್ತುತ ಕಾನೂನು ಅಳವಡಿಕೆಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು.