‘ಕುಂದಪ್ರಭ’ ಸಂಸ್ಥೆ ಭಂಡಾರ್ಕಾರ್ಸ್ ಕಾಲೇಜು, ರೇಡಿಯೋ ಕುಂದಾಪ್ರ 89.6 ಸಹಯೋಗದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕುಂದಾಪ್ರ ಕನ್ನಡ ಹಾಡುಗಾರಿಕೆ ಹಾಗೂ ಕವನ ಪಠಣ ಕಾರ್ಯಕ್ರಮ ಏರ್ಪಡಿಸಿದೆ. ಸತತ ನಾಲ್ಕು ಗಂಟೆಗಳ ಕಾಲ ನಡೆಯಲಿರುವ ಈ ವಿದ್ಯಾರ್ಥಿಗಳ ಪೈಪೋಟಿಯಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಕುಂದಾಪ್ರ ಕನ್ನಡದ ಜನಪ್ರಿಯ ಹಾಡುಗಳು, ಸ್ವರಚಿತ ಕವನಗಳ ವಾಚನ, ಹಾಡುಗಾರಿಕೆ ನಡೆಯಲಿದ್ದು, ಹೊಸ ಯುವ ಪ್ರತಿಭೆಗಳು ಬೆಳಕಿಗೆ ಬರಲಿವೆ.
ಜುಲೈ 21 ರಂದು ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಹಲವು ಹಿರಿಯರು ಮಾರ್ಗದರ್ಶನ ಮಾಡಲಿದ್ದಾರೆ.
ಉತ್ತಮ ಹಾಡುಗಾರಿಕೆ, ಕವನ ವಾಚನ ಪ್ರದರ್ಶಿಸಿದವರಿಗೆ ಆಕರ್ಷಕ ಬಹುಮಾನ, ಗೌರವ ನೀಡಲಾಗುತ್ತದೆ ಹಾಗೂ ‘ರೇಡಿಯೋ ಕುಂದಾಪ್ರ 89.6’ ಬಾನುಲಿಯಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಕಾರ್ಯಕ್ರಮ ಸಂಯೋಜಕರಾದ ಯು. ಎಸ್. ಶೆಣೈ ತಿಳಿಸಿದ್ದಾರೆ.