ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 1ರಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾಮಟ್ಟದ ಹಾಡು & ಕಥೆ ಹೇಳುವ ಸ್ಪರ್ಧೆ ಹಮ್ಮಿಕೊಳ್ಳಲಾಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಜಯಕರ ಪೂಜಾರಿ ಗುಲ್ವಾಡಿ ( ಕಾರ್ಯದರ್ಶಿ, ಉಡುಪಿ ಜಿಲ್ಲಾ ಭಜನಾ ಒಕ್ಕೂಟ, ಉಡುಪಿ ) ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು
ಮಕ್ಕಳಿಗೆ ಹಾಡು ಹಾಡುವುದು ಮತ್ತು ಕಥೆಗಳನ್ನು ಹೇಳುವುದು ಮತ್ತು ಕೇಳುವುದನ್ನು ತುಂಬಾ ಇಷ್ಟಪಡುತ್ತಾರೆ ಈ ದಿಶೆಯಲ್ಲಿ
ಆಡಳಿತಮಂಡಳಿಯು ಆಯೋಜಿಸುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಇಂದಿನ ದಿನಗಳಲ್ಲಿ ಭಾಷೆ ಕೌಶಲ್ಯಗಳ ಬೆಳವಣಿಗೆ ಸಾಂಸ್ಕೃತಿಕ ಕಾರ್ಯಕ್ರಮ ಅತೀ ಅಗತ್ಯ,ಕಥೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಅನುಭವವಾಗಿರುತ್ತದೆ ಇವು ವಿವೇಕ ಹಾಗೂ ಜ್ಞಾನವನ್ನು ಅವಿಸ್ಮರಣೀಯವಾಗಿ ಕಲ್ಪನಾ ಶಕ್ತಿಯನ್ನು ಬೆಳೆಸುತ್ತದೆ ಲಯಬದ್ದವಾದ ಹಾಡುಗಾರಿಕೆ ಮಕ್ಕಳಲ್ಲಿ ಹೊಸ ಕ್ರಿಯಾಶೀಲತೆ ನೀಡುತ್ತದೆ ಎಂದರು
ನಿರ್ಣಾಯಕರಾಗಿ ಶ್ರೀ ಜಯಕರ ಪೂಜಾರಿ, ಗುಲ್ವಾಡಿ, ಸುಹಾಸ್ ಮಲ್ಯ (ಹಳೇವಿದ್ಯಾರ್ಥಿ) ಶಿಕ್ಷಕ ರಾಮ ಕಾರ್ಯನಿರ್ವಹಿಸಿದರು ಮುಖ್ಯಶಿಕ್ಷಕ ಡಾ. ರವಿದಾಸ್ ಶೆಟ್ಟಿ, ಪಾಲಕರು, ವಿದ್ಯಾರ್ಥಿಗಳು ಮತ್ತು
ಶಿಕ್ಷಕರು ಉಪಸ್ಥಿತರಿದ್ದರು
ಶಿಕ್ಷಕಿ ಅಕ್ಷತಾ ಸ್ವಾಗತಿಸಿ, ಶಿಕ್ಷಕಿ ರಶ್ಮಿತಾ ವಂದಿಸಿ, ಶಿಕ್ಷಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು
ವಿಜೇತರ ಯಾದಿ :
ಹಾಡು ಹೇಳುವುದು
1ನೇ ತರಗತಿ
1.ದರ್ಶಿನಿ ಎಚ್ ಎನ್,ಪ್ರಥಮ
2.ಯಶ್ವಿ ಆರ್, ದ್ವಿತೀಯ
3.ಐಶಾನಿ ಸಿ, ತೃತೀಯ
ಹಾಡು ಹೇಳುವುದು
2ನೇ ತರಗತಿ
1.ಯುಕ್ತ ಬಿ ಭಟ್, ಪ್ರಥಮ
2.ಸನ್ನಿಧಿ ಪಿ, ದ್ವಿತೀಯ
3.ಅದ್ವಿತಿ ಸಿ, ತೃತೀಯ
4.ರಿತ್ವಿಕ್ ಆರ್, ತೃತೀಯ
ಕಥೆ ಹೇಳುವುದು
1ನೇ ತರಗತಿ
1.ಬ್ರಾಹ್ಮೀ ಎ ಶೆಟ್ಟಿ, ಪ್ರಥಮ
2.ಶ್ರೀಕೃತಿ ಕಲ್ಕೂರ್, ದ್ವಿತೀಯ
3.ಇಳಾ ಅಡಿಗ, ತೃತೀಯ
2ನೇ ತರಗತಿ.
1.ಆರ್ಯ ಜೆ ಕೊಠಾರಿ, ಪ್ರಥಮ
2.ಸಮೀಕ್ಷಾ ಡಿ ಶೆಟ್ಟಿ, ದ್ವಿತೀಯ
3.ಚಿರಂತ ಎಸ್ ದೇವಾಡಿಗ, ತೃತೀಯ
4.ಪ್ರಿಯಾಂಶ ಎಸ್ ನಾಯ್ಕ್, ತೃತೀಯ