9 ವರ್ಷದಿಂದ ನರೇಂದ್ರ ಮೋದಿ ಸರ್ಕಾರ ಸುಳ್ಳು ಭರವಸೆಗಳಿಂದ ದೇಶದ ಜನರಿಗೆ ಮೋಸ : ಶಾಸಕ ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 1 : 9 ವರ್ಷದಿಂದಲೂ ನರೇಂದ್ರ ಮೋದಿ ಸರ್ಕಾರವು ಸುಳ್ಳು ಭರವಸೆಗಳಿಂದ ದೇಶದ ಜನರನ್ನು ಮೋಸ ಮಾಡುತ್ತಿದ್ದಾರೆ ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು .
ಪಟ್ಟಣದ ಮಿಲನ್ ಸಾರ್ ಮ್ಯಾಂಗೋ ಮಂಡಿಯಲ್ಲಿ ಭಾನುವಾರ ಅಲ್ಪಸಂಖ್ಯಾತ ಸಮುದಾಯದ ಸಮಾವೇಶ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ರಾಹುಲ್‍ಗಾಂದಿರವರು ಕಳೆದ ನಾಲ್ಕು ವರ್ಷಗಳ ಹಿಂದೆ ಪಕ್ಷದ ಸಮಾವೇಶದಲ್ಲಿ ಮಾತನಾಡಿ ಲಲಿತ್ ಮೋದಿ, ವಿಜಯಮಲ್ಯ ರಂತಹ ಅನೇಕರು ಬ್ಯಾಂಕ್‍ಗಳಲ್ಲಿ ಸಾಲವನ್ನು ಪಡೆದು ಸಾಲವನ್ನು ಹಿಂತಿರಗಿಸದೆ ದೇಶ ಬಿಟ್ಟು ಹೋಗಿದ್ದು, ಮೋದಿ ಸರ್ಕಾರವು ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ನಾಲ್ಕುವರ್ಷಗಳ ನಂತರ ಗುಜರಾತ್‍ನ ಕೋರ್ಟ್‍ನಲ್ಲಿ ಕೇಸು ದಾಖಲಿಸಿ , ರಾಹುಲ್‍ಗಾಂದಿ ರವರಿಗೆ 2ವರ್ಷ ಜೈಲು ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವವನ್ನು ಅನರ್ಹ ಗೊಳಿಸಿದ್ದು, ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ದುರಾಡಳಿತವು ಎತ್ತಿತೋರಿಸಿದ್ದಂತಾಗಿದೆ.
ನೆಹರು ಕುಟುಂಬವು ದೇಶಕ್ಕಾಗಿ ತ್ಯಾಗ ಮಾಡಿ ಹೋರಾಡಿದ್ದು, ನೆಹರು 3 ವರ್ಷ ದೇಶಕ್ಕಾಗಿ ಜೈಲು ವಾಸವನ್ನು ಅನುಭವಿಸಿದ್ದರು. ದೇಶದಲ್ಲಿ ಶಾಂತಿ , ಸುವ್ಯವಸ್ಥೆ ಕಾಪಾಡುವ ಹಾಗು ದೇಶದಲ್ಲಿನ ಜನರ ಕಷ್ಟ ಸುಖಗಳನ್ನು ಅರಿಯುವ ನಿಟ್ಟನಲ್ಲಿ ರಾಹುಲ್ ಗಾಂದಿರವರು ಕನ್ಯಕಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆಯನ್ನು ನಡೆಸಿ ಆಯಾ ಆಯಾ ಪ್ರಾಂತಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ, ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕಾಗಿದೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾಂತರಿಗೆ ಸರ್ಕಾರದ ಬಹುತೇಕ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಎಂಎಲ್‍ಸಿ ನಜೀರ್ ಅಹಮ್ಮದ್ ಮಾತನಾಡಿ 2013 ರಲ್ಲಿ ವಕ್ಪಬೋರ್ಡ್ ನಿಂದ ಮಸೀದಿಯ ಮೌಲಿಗಳಿಗೆ ಸಂಬಳವನ್ನು ನೀಡಲಾಗುತ್ತಿದೆ. ಬಿಜೆಪಿ ಸರ್ಕಾರವು ನಮ್ಮ ಸಮುದಾಯದ 2ಬಿ ಮೀಸಲಾತಿಯನ್ನು ತೆಗೆದಿದ್ದು, ಮುಂದಿನ ದಿನಗಳಲ್ಲಿ ಮೀಸಲಾತಿ ವಿಚಾರವಾಗಿ ಕೋರ್ಟ್ ಮೆಟ್ಟಿಲು ಏರುವುದಾಗಿ ತಿಳಿಸಿದರು.
ರಮೇಶ್‍ಕುಮಾರ್‍ರವರು ಕ್ಷೇತ್ರಕ್ಕೆ ನಾಯಕರಲ್ಲ, ದೇಶ, ರಾಜ್ಯಕ್ಕೆ ನಾಯಕರು ಇವರನ್ನ ನಮ್ಮೆಲ್ಲರ ಅಮೂಲ್ಯವಾದ ಮತವನ್ನು ವ್ಯರ್ಥ ಮಾಡದೆ ರಮೇಶ್‍ಕುಮಾರ್‍ರವರಿಗೆ ಮತವನ್ನು ಹಾಕುವುದರ ಮೂಲಕ ಗೆಲ್ಲಿಸಿ ಬೇಕೆಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಶರೀಫ್, ಪುರಸಭೆ ಸದಸ್ಯರಾದ ಕೆ.ಅನೀಸ್‍ಆಹಮ್ಮದ್, ಮುನಿರಾಜು ಮುಖಂಡರಾದ ಸಂಜಯ್‍ರೆಡ್ಡಿ, ಕೆ.ಕೆ.ಮಂಜು, ಬಿ.ಎಲ್.ಸೂರ್ಯನಾರಾಯಣ, ಬಿ.ಎಂ.ಪ್ರಕಾಶ್, ಸೈಯದ್ ಬಿ.ಜಿ.ಖಾದರ್, ಬಕ್ಷುಸಾಬ್, ಚಾನುಬಾಷ, ಇನ್ನಾಯುತ್ತುಲ್ಲಾ, ರಫೀಕ್ , ಸೀತಾರಾಮರೆಡ್ಡಿ, ಕೃಷ್ಣ, ಮುಕ್ತಿಯಾರ್, ಕೆ.ನಾರಾಯಣಸ್ವಾಮಿ ಇದ್ದರು.