ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ: ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೆ ನಿಜವಾದ ಶಿಕ್ಷಣ- ಬಿಷಪ್ ಜೆರಾಲ್ಡ್ ಲೋಬೊ

ಕುಂದಾಪುರ, ಡಿ.17: ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೆ ನಿಜವಾದ ಶಿಕ್ಷಣ. ನಮ್ಮ ಉಡುಪಿ ಧರ್ಮಪ್ರಾಂತ್ಯದಲ್ಲಿ ಒಟ್ಟು 67 ವಿಧ್ಯಾ ಸಂಸ್ಥೆಗಳನ್ನು ನಡೆಸಲಾಗುತ್ತದೆ, ನಮ್ಮ ಎಲ್ಲಾ ಸಂಸ್ಥೆಗಳಲ್ಲಿ ಒಂದೇ ಧ್ಯೇಯವಾಗಿದ್ದು, ಅದು ಉತ್ತಮ ಮೌಲ್ಯಗಳು ಮತ್ತು ಉತ್ತಮ ಗುಣಗಳನ್ನು ಬೆಳಸಿ ದೇಶಕ್ಕೆ ಉತ್ತಮ ನಾಗರಿಕರನ್ನು ಮಾಡುವ ಧ್ಯೇಯವಾಗಿರುತ್ತದೆ. ಜನರಲ್ಲಿ ಜ್ಞಾನದ ಕ್ರಾಂತಿಯನ್ನು ಉಂಟು ಮಾಡುವುದೆ ಉತ್ತಮ ಶಿಕ್ಷಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯ ಪಟ್ಟರು.
ಅವರು ಕುಂದಾಪುರದ ಪ್ರತಿಷ್ಠಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವದ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಉಡುಪಿ ಧರ್ಮಪ್ರಾಂತ್ಯದ 67 ವಿಧ್ಯಾ ಸಂಸ್ಥೆಗಳ ಸಂಚಾಲಕರಾದ ಅವರು ‘ಶಿಕ್ಷಣ ಅಂದರೆ ಒದು ಬರಹ ಅಲ್ಲಾ, ಜ್ಞಾನ ಸಂಪಾದಿಸುವುದು ಕೂಡ ಅಲ್ಲಾ, ಬದಲಾಗಿ ಮಾನವನ ವಿಕಾಸ ಎಂದು ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಂಡರು. ಶಿಕ್ಷಣ ಅಂದರೆ ಮಾನವನ ಅಧ್ಯಾತ್ಮಿಕ, ಬೌದ್ದಿಕ ಮತ್ತು ದೈಹಿಕ ಬೆಳವಣಿಗೆ ಮಾಡುವುದೇ ಶಿಕ್ಷಣ, ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಮೌಲ್ಯಧಾರಿತ ಶಿಕ್ಷಣ ನೀಡುವುದಕ್ಕೆ ಮೊದಲ ಆಧ್ಯತೆ, ಇಲ್ಲಿನ ಅನೇಕ ಮಕ್ಕಳು, ಶಿಕ್ಷಣದಲ್ಲಿ ಮತ್ತು ಶಿಕ್ಷಣಕೇತರ ವಿಭಾಗಗಳಾದ ಆಟ ಪಾಠ, ಸಂಗೀತ, ನಾಟ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ, ಅಂದರೆ ಇಲ್ಲಿನ ಶಿಕ್ಷಣ ನೀಡುವ ಶಿಕ್ಷಕರ ಗುಣ ಮಟ್ಟ ಇದಕ್ಕೆ ಸಾಕ್ಶಿಯಾಗಿದೆ’ ಎನ್ನುತ್ತಾ ಇಲ್ಲಿನ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದ ಪೆÇೀಷಕರಿಗೆ ಅಭಿನಂದನೆ ಸಲ್ಲಿಸಿ, ಸಂಸ್ಥಾಪಕರನ್ನು, ಸಂಚಾಲಕರನ್ನು, ಮುಖ್ಯೋಪಾಧ್ಯಾನಿಯರನ್ನು, ಶಿಕ್ಷಕರನ್ನು, ಶಿಕ್ಷಕೇತರನ್ನು, ವಿದ್ಯಾರ್ಥಿಗಳನ್ನು ದಾನಿಗಳನ್ನು ಧನ್ಯವಾದ ಸಮರ್ಪಿಸಿ ಅಭಿನಂದನೆಗಳುನ್ನು ಸಲ್ಲಿಸಿದರು.
ಉಡುಪಿ ಧರ್ಮಪ್ರಾಂತ್ಯದ ವಿಧ್ಯಾಮಂಡಳಿಯ ಕಾರ್ಯದರ್ಶಿ ವಂ|ಧರ್ಮಗುರು ವಿನ್ಸೆಂಟ್ ಕ್ರಾಸ್ತಾ ಮಾತನಾಡಿ “ನಮ್ಮ ಶಾಲೆಗಳು ಉನ್ನತ ಮೌಲ್ಯವುಳ್ಳ ಶಿಕ್ಷಣ ನೀಡಲು ಶ್ರಮಿಸುತ್ತದೆ, ಕುಂದಾಪುರದ ಹ್ರದಯ ಭಾಗದಲ್ಲಿರುವ ಈ ಜಾಗದಲ್ಲಿ ವ್ಯಾಪರ ಮಳಿಗೆ ಕಟ್ಟಿದರೆ ಕುಂದಾಪುರ ಚರ್ಚಿಗೆ ಕೋಟಿ ಕಟ್ಟಲೆ ಲಾಭವಾಗುತಿತ್ತು, ಆದರೆ ಹಾಗೇ ಮಾಡಲಿಲ್ಲ, ಜನರಿಗೆ ವಿಧ್ಯೆ ನೀಡುವುದೇ ನಮ್ಮ ಕಥೊಲಿಕರ ಉದ್ದೇಶ, ಎಲ್ಲಿ ಒಂದು ಇಗರ್ಜಿ ಇದೆಯೋ ಅಲ್ಲಿ ಶಾಲೆ ಇರುತ್ತದೆ, ಕಾರಣ ಮನುಷ್ಯನ ವಿಕಾಸಕ್ಕೆ ಶಿಕ್ಷಣ ಮುಖ್ಯ ಎಂದು ತಿಳಿದು ಇದನ್ನು ನೂರಾರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ.
ಕುಂದಾಪುರದ ಬ್ಲಾಕ್ ಶಿಕ್ಷಣ ಅಧಿಕಾರಿ ಸಿ.ಎಸ್.ಕಾಂತಾರಾಜು ಮಾತನಾಡಿ “ರೋಜರಿ ಶಾಲೆ ಮತ್ತು ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಾಧಾರಿತ, ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮಂಚೂಣಿಯಲ್ಲಿದ್ದಾರೆ, ಅವರ ಪ್ರೀತಿ ನಮಗೆ ಸಂತೋಷ ತಂದಿದೆ. ಮಾನವ ಸಹಿತ ಪಶು ಪಕ್ಷಿ ಇವುಗಳೆಲ್ಲವೂ ವಿಕಾಸಭರಿತರಾಗಬೇಕು, ಅದರಲ್ಲಿಯೂ ನಾವು ಮಾನವೀಯ ಗುಣಗಳನ್ನು ತಮ್ಮದಾಗಿಸಿಕೊಳ್ಳಬೇಕು, ಮೊದಲು ಸಂಸ್ಕಾರ ಕಲಿಯಬೇಕು, ಮಗು ಉದ್ದಟತನ ಪ್ರದರ್ಶಿಸಿದರೆ ಮನೆಯಲ್ಲಿ ಹೆತ್ತವರು ನಿನಗೆ ಗುರುಗಳು ಇದನ್ನೆ ಕಲಿಸಿದರೊ ಎಂದು ಕೇಳುತ್ತಾರೆ. ಶಿಕ್ಷಕ ನಿನಗೆ ಮನೆಯಲ್ಲಿ ಇದನ್ನೆ ಕಲಿಸಿದ್ದೊ ಎಂದು ಕೇಳುತ್ತಾರೆ. ಅದಕ್ಕೆ ನಾವು ಮೊದಲು ಮಾನವರಾಗೋಣ” ಎಂದು ತಿಳಿಸಿದರು.

ಮುಖ್ಯ ಅತಿಥಿ ಲಿಟಲ್ ರೋಕ್ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ಪೆÇ್ರ.ಮಥ್ಯೂ ಸಿ. ನಿನಯ್ನ್ “ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದೆ, ನಮ್ಮಲ್ಲಿ ಉತ್ತಮ ವಿದ್ಯಾಭಾಷ ಸಿಗುವುದಿಲ್ಲವೆಂದು, ಭಾರತೀಯರು ವಿದೇಶಕ್ಕೆ ತೆರಳುತಿದ್ದಾರೆ, ಹಿಗಾಗಿ ಭಾರತದವರು ಮಿಲಿಯಾಕಟ್ಟಲೆ ಹಣ ವಿದೇಶದ ಪಾಲಾಗುತದೆ ಮತ್ತು ಅವರಲ್ಲಿ ಹೆಚ್ಚಿನವರು ಆಲ್ಲಿಯೆ ನೆಲೆ ನಿಲ್ಲುತ್ತಾರೆ ಅಲ್ಲದೆ ಭಾರತೀಯರು ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ, ಹೀಗಾಗಿ ಒಳ್ಳೆಯ ಮೆದುಳುಗಳು ವಿದೇಶದ ಪಾಲಾಗುತ್ತವೆ” ಎಂದು ಹೇಳಿದರು.
ಶಾಲೆಯ ಸಂಸ್ಥಾಪಕರಾದ ಅ|ವಂ|ಸ್ಟ್ಯಾನಿ ಬಿ.ಲೋಬೊರವರನ್ನು ಸನ್ಮಾನಿಸಲಾಯಿತು. ಅವರು ಶುಭ ಕೊರೀದರು. ಮಾಜಿ ಸಂಚಾಲಕರಾದ ಧರ್ಮಗುರು ವಂ|ಅನಿಲ್ ಡಿಸೋಜಾ, ಮಾಜಿ ಮುಖ್ಯೋಪಾಧ್ಯಾಯಿನಿಯರನ್ನು, ಹಾಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಮಾಜಿ ಮತ್ತು ಹಾಲಿ ಶಿಕ್ಷಕರನ್ನು, ಅತಿಥಿಗಳನ್ನು ಉತ್ತಮ ಸಾಧನೆಗೈದ ವಿಧ್ಯಾರ್ಥಿಗಳನ್ನು ದಾನಿ ಐವನ್ ಡಿಆಲ್ಮೇಡಾ ಮತ್ತಿತರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಪ್ರೀತಿ ಆಂದ್ರಾದೆ,ಪ್ರತಿಮಾ, ರಮ್ಯಾ ಹೆಗ್ಡೆ, ಸಿಸ್ಟರ್ ಸುನೀತಾ,ನಿಮಿಷಾ ಗೊನ್ಸಾಲ್ವಿಸ್, ರಮ್ಯಾ, ವಿಧ್ಯಾ, ಪ್ರತಿಮಾ ಶೆಟ್ಟಿ,ನಿಖಿತಾ ಶೆಟ್ಟಿ, ರಂಜಿತಾ, ರತ್ನಾಕರ ಶೆಟ್ಟಿ, ಪ್ರಶಾಂತ್ ರೇಬೆರೊ,ಒರನ್ ಡಿಸೋಜಾ, ಶಿಕ್ಷೇತರ ಸಿಬಂದಿ ಸುನೀತಾ ಡಿಸೋಜಾ ಕಾರ್ಯಕ್ರಮದಲ್ಲಿ ಪರಿಚಯ ಸನ್ಮಾನ ಕಾರ್ಯಕ್ರಮದಲ್ಲಿ ಸಹಕರಿಸಿದರು.
ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪುರಸಭೆ ಸದಸ್ಯ ಪ್ರಭಾಕರ, ಎಸ್.ಪಿ.ಎಲ್. ಹಳೆ ವಿದ್ಯಾರ್ಥಿ ಸಂಘದ ನಾಯಕ ಉಪಸ್ಥಿತರಿದ್ದರು.
ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಶಾಲ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು, ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ಮತ್ತು ವಿದ್ಯಾರ್ಥಿಗಳಾದ ಹೇವಿನ್ ಕೋತಾ ಮತ್ತು ದಿಕ್ಷೀತಾ ನಿರೂಪಿಸಿದರು.
ಸಂಭ್ರಮದ ಮೊದಲ ದಿನ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು. ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿದ್ದು, ಮುಖ್ಯ ಅತಿಥಿಯಾಯಾಗಿ ಅಕೀಲೇಶ್ ಚಾರ್ಟೆಟ್ ಅಂಕ್ವಾಟೆಂಡ್ ಅವರು ತನ್ನ ತಂದೆಯ ಹೆಸರಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಲು ದೇಣಿಗೆ ನೀಡಿದರು. ಜೊನ್ಸನ್ ಡಿಆಲ್ಮೇಡಾ ಮತ್ತು ವಡೇರ್ ಹೋಬಳಿ ಕ್ಲಸ್ಟರ್ ವಿಭಾಗದ ಸಂಪನ್ಮೂಲ ವ್ಯಕ್ತಿ ಶಂಕರ ಶೆಟ್ಟಿ ಅತಿಥಿಗಳಾಗಿದ್ದರು. ಅತಿಥಿ ಮತ್ತು ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಲಾಯಿತು.