ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ : ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ

ಬಂಗಾರಪೇಟೆ: ಸನ್ಮಾನ್ಯ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಮೂಲಕ ದೇಶದಾದ್ಯಂತ ಜಾತಿ, ಮತ, ಧರ್ಮ, ಪಂಥದ ಎಲ್ಲೆಯನ್ನು ಮೀರಿ ಜನರ ಭಾವನೆಗಳಿಗೆ ಸ್ಪಂದಿಸಿದ್ದಾರೆ, ಇವರ ವರ್ಚಸ್ಸನ್ನು ಕಂಡ ಬಿಜೆಪಿ “ಮೋದಿಯವರ ವಿರುದ್ಧ ಪ್ರಚೋದನಕಾರಿ ಭಾಷಣ” ಎಂಬ ದೂರನ್ನು ದಾಖಲಿಸಿ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಲಾರದಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾನ್ಯ ರಾಹುಲ್ ಗಾಂಧಿಯವರು “ಮೋದಿ ರವರನ್ನು ಕುರಿತು ಪ್ರಚೋದನಕಾರಿ ಭಾಷಣ ನೀಡಿದ್ದಾರೆ “ಎಂದು ಸುಳ್ಳು ದೂರನ್ನು ದಾಖಲಿಸಿದ್ದಾರೆ, ಆದಕಾರಣ ರಾಹುಲ್ ಗಾಂಧಿಯವರ ಸಂಸತ್ ಸ್ಥಾನ ವಂಚಿತವಾಗಿದೆ, ಇದರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಮೌನ ಪ್ರತಿಭಟನೆಯನ್ನು ನಡೆಸಲು ಮುಂದಾಗಿದೆ.

ಷಡ್ಯಂತರ ರೂಪಿಸಿದ ಬಿಜೆಪಿ:


ಸ್ವತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧೀಜಿರವರು ದೇಶದ ಜನರನ್ನು ಒಗ್ಗೂಡಿಸಲು ಬೃಹತ್ ಪಾದಯಾತ್ರೆಯನ್ನು ಮಾಡಿದ್ದರು, ತದನಂತರ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದಲ್ಲಿ ಕೋಮುವಾದ, ಜಾತಿವಾದ, ಎಂಬ ದ್ವೇಷವನ್ನು ಉಂಟು ಮಾಡಿ ಸಾಮರಸ್ಯ ಕದಡಿ ದೇಶವನ್ನು ವಿಭಜಿಸಲು ಯತ್ನಿಸಿತು, ಇದನ್ನು ದೂರ ಮಾಡಬೇಕು ರಾಷ್ಟ್ರವನ್ನು ಭ್ರಾತೃತ್ವ, ಸಹಬಾಳ್ವೆಯ ಆಧಾರದ ಮೇಲೆ ಒಟ್ಟುಗೂಡಿಸಿ ಏಕತೆಯನ್ನು ಉಂಟು ಮಾಡಬೇಕು ಎಂಬ ಉದ್ದೇಶದಿಂದ ಸನ್ಮಾನ್ಯ ರಾಹುಲ್ ಗಾಂಧೀಜಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ 4000 ಕಿಲೋಮೀಟರ್ ಭಾರತ್ ಜೋಡು ಪಾದಯಾತ್ರೆಯ ಮೂಲಕ ರಾಷ್ಟ್ರವನ್ನು ಸಂಘಟಿಸಿದ್ದರು.
ಈ ಸಂದರ್ಭದಲ್ಲಿ ಜಾತಿ ಮಾತ ಧರ್ಮ ಪಂಥ ಎಲ್ಲೆಯನ್ನು ಮೀರಿ ಅದ್ಭುತ ಪೂರ್ವ ಜನಬೆಂಬಲ ದೊರೆಯಿತು, ಇವರ ಯಶಸ್ಸು ಮತ್ತು ವರ್ಚಸ್ಸನ್ನು ಸಹಿತದ ಬಿಜೆಪಿ ಅನಗತ್ಯವಾಗಿ ತನ್ನದೇ ಆಡಳಿತ ಇರುವಂತಹ ಗುಜರಾತ್ ನ್ಯಾಯಾಲಯದಲ್ಲಿ “ಪ್ರಚೋದನಕಾರಿ ಭಾಷಣ” ಎಂದು ಸುಳ್ಳು ದಾವೆ ದಾಖಲು ಮಾಡಿ ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಲಕ್ಷಾಂತರ ಕಾರ್ಯಕರ್ತರು ರಾಹುಲ್ ಗಾಂಧಿಯವರ ಬೆನ್ನಿಗೆ ನಿಂತಿದ್ದಾರೆ. ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ.

ನ್ಯಾಯಾಲಯದ ದುರುಪಯೋಗ:


ಕೋಲಾರದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ತನ್ನದೇ ಆಡಳಿತ ಇರುವಂತಹ ಗುಜರಾತಿನ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಕೊರತೆ:
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದರೂ ಸಹ ಇಂದಿಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಕೇಂದ್ರ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 610 ಭರವಸೆಗಳನ್ನು ನೀಡಿತ್ತು ಆದರೆ ಅವುಗಳಲ್ಲಿ 10% ಇಡೇರಿಸಲು ಸಾಧ್ಯವಾಗದೆ ಸಂಪೂರ್ಣವಾಗಿ ವಿಫಲವಾಗಿದೆ.

ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ:


ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಇಡೇರಿಸುತ್ತಿದೆ, ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕಾದ ಬಿಜೆಪಿ ವಿನಾಕಾರಣ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರತಿಭಟನೆ ಮಾಡುವುದರ ಮೂಲಕ ಸದನಕ್ಕೆ ಗೌರವ ತೋರುತ್ತಿದ್ದಾರೆ, ಮತ್ತು ಕಾಲಹರಣ ಮಾಡಲು ಮುಂದಾಗಿದೆ, ಇದು ಅವರಿಗೆ ಸಾರ್ವಜನಿಕರ ಬಗ್ಗೆ ಇರುವಂತಹ ನಿರುತ್ಸಾಹ ಧೋರಣೆಯ ಪ್ರತಿಬಿಂಬವಾಗಿದೆ. ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ, ಕೆ.ವಿ.ನಾಗರಾಜು, ಗೋಪಾಲಗೌಡ, ನಗರ ಘಟಕದ ಅಧ್ಯಕ್ಷ ಚಂದು, ಪುರಸಭಾ ಸದಸ್ಯರಾದ ಶಶಿ, ಶಂಸುದ್ದೀನ್ ಬಾಬು, ಸುಹೇಲ್, ಮಹದೇವ್, ಮಂಜು, ಅಣ್ಣ ದೊರೆ, ಹಾ.ನಾ.ಹರೀಶ್, ರಫೀಕ್, ಮುದಾಸಿರ್, ನವೀನಗೌಡ, ಪ್ರಶಾಂತ್, ಎಚ್.ಕೆ.ನಾರಾಯಣಸ್ವಾಮಿ, ಅಜಾಂಪಾಷ, ಆರೋಗ್ಯ ರಾಜನ್, ಜಗನ್, ಬಾಬು ಇತರರು ಉಪಸ್ಥಿತರಿದ್ದರು.