ಬೆಂಗಳೂರು: ಟಿವಿ, ಫ್ರಿಡ್ಜ್ ಬೈಕು, ಹೊಂದಿರುವ ಬಿಪಿಎಲ್ ಕಾರ್ಡ್ ದಾರರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎನ್ನುವ ಮಾಧ್ಯಮ ವರದಿಗಳಿಗೆ ಉತ್ತರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಇದೀಗ ಸ್ಪಷ್ಟನೆ ನೀಡಿದ್ದು, ಈ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಟಿವಿ ಫ್ರಿಡ್ಜ್ ಹಾಗೂ ಬೈಕ್, ಹೊಂದಿದವರು ಎಂಬ ಕಾರಣಕ್ಕೆ ಅಂತ್ಯೋದಯ ಅನ್ನ ಮತ್ತು ಬಿಪಿಎಲ್ ಕಾರ್ಡ್ ಪಡಿತರ ಚೀಟಿದಾರರ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ, ಟಿವಿ, ಫ್ರಿಡ್ಜ್, ಬೈಕ್ ಹೊಂದಿರುವ ಕುಟುಂಬಗಳು ಕೂಡ ಬಿಪಿಎಲ್ ಚೀಟಿ ಹೊಂದಲು ಸರ್ಕಾರದ ನಿಯಮದಲ್ಲಿ ಅವಕಾಶವಿದೆ ಎಂದು ಇಲಾಖೆಯು ತಿಳಿಸಿದೆ.
ಫ್ರಿಡ್ಜ್ , ಟಿವಿ ಹಾಗೂ ಬೈಕ್, ಹೊಂದಿದ ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ ಎನ್ನುವ ಸುದ್ದಿಗಳು ಆಧಾರ ರಹಿತವಾಗಿದೆ. ಇಂತಹ ಯಾವುದೇ ನಿರ್ದೇಶನ ಅಥವಾ ಆದೇಶಗಳನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗಳಿಗೆ ನೀಡಿಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.