ಕೋಲಾರ / ಡಿಸೆಂಬರ್ (ಹಿ.ಸ) : ಸರ್ಕಾರಿ ಶಾಲೆಗಳಲ್ಲಿ ಬಿಸಿಯುಟ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಗಾಂಧಿ ರವರು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿರುವಂತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಆರು ಸಾವಿರ ವೇತನವನ್ನು ಹೆಚ್ಚಳ ಮಾಡುವುದಾಗಿ ಎಂದು ಘೋಷಣೆ ಮಾಡಿದರು.
ಸರ್ಕಾರ ಬಂದು ಆರು ತಿಂಗಳಾಗಿದೆ ಇದುವರೆಗೂ ಬಿಸಿಯೂಟ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿರುವುದು ಬಹಳಷ್ಟು ನೋವಿನ ಸಂಗತಿಯಾಗಿದೆ ಆದ್ದರಿಂದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕರಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಬಿಸಿಯೂಟ ನೌಕರರ ವೇತನ ಮತ್ತು ಇತರೆ ವಿಚಾರಗಳನ್ನು ಪ್ರಶ್ನಿಸಬೇಕೆಂದು ಒತ್ತಾಯಿಸಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ನೇತೃತ್ವದಲ್ಲಿ ಇಂದು ನಗರದ ಶಾಸಕರ ಕಚೇರಿಯಲ್ಲಿ ಕೋಲಾರ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂಎಲ್ ಅನಿಲ್ ಕುಮಾರ್ ಅವರಿಗೆ ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ ರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ, ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜ್ಯೋತಿ, ಕೋಲಾರ ಮಮತಾ, ಮುಳಬಾಗಿಲು ಅಮ್ಮಯಮ್ಮ, ಅಮರಾವತಮ್ಮ, ವನಿತ, ಮುನಿರತ್ನ, ಸುಗಟೂರು ಶೋಬಮ್ಮ, ರಾಧಮ್ಮ, ನಾಗಮ್ಮ, ಪದ್ಮಮ್ಮ, ಸುಮಾ, ರತ್ನಮ್ಮ, ಟೇಕಲ್ ರಾಧಮ್ಮ, ನರಸಾಪುರ ಆರತಿ, ಜಯಂತಿ, ಆಶಾ, ಮಂಜುಳಾ, ವರಲಕ್ಷ್ಮಿ, ಅನುಷ , ಸಾವಿತ್ರಮ್ಮ, ಆಂಜನಮ್ಮ, ವನಜಾಕ್ಷಮ್ಮ, ಸುಶೀಲಮ್ಮ, ಅಮರಾವತಿ, ದುರ್ಗಮ್ಮ ಮಂಜಮ್ಮ ಗಾಯತ್ರಿ ಸರೋಜಮ್ಮ ಗಿರಿಜಾ ಶಾಂತಮ್ಮ ಚೈತ್ರ ಇನ್ನು ಮುಂತಾದವರು ಹಾಜರಿದ್ದರು.